ಪಿಜ್ಜಾ ಹೆಸರು ಹೇಳಿದ್ರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ದೊಡ್ಡವರಿಂದ ಹಿಡಿದು ಸಣ್ಣವರವರೆಗೆ ಎಲ್ಲರೂ ಪಿಜ್ಜಾ ಇಷ್ಟಪಡ್ತಾರೆ. ಆದ್ರೆ ಹೊರಗೆ ಸಿಗುವ ಪಿಜ್ಜಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿಯೇ ಪಿಜ್ಜಾ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ.
ಪಿಜ್ಜಾ ಮಾಡಲು ಬೇಕಾಗುವ ಸಾಮಗ್ರಿ:
ಪಿಜ್ಜಾ ಬೇಸ್ : 1
ಈರುಳ್ಳಿ : 1
ಬ್ರೊಕೊಲಿ : ಒಂದುವರೆ ಕಪ್ ( ಬೇಯಿಸಿದ್ದು)
ಆಲಿವ್ ಆಯಿಲ್ : ಒಂದುವರೆ ಚಮಚ
ಉಪ್ಪು : ಅಗತ್ಯಕ್ಕೆ ತಕ್ಕಷ್ಟು
ಚೀಸ್ : 2 ಕಪ್
ಬೆಳ್ಳುಳ್ಳಿ ಪೇಸ್ಟ್ : ಸ್ವಲ್ಪ
ಮರಿನಾರಾ ಸಾಸ್ : ¼ ಕಪ್
ಪಿಜ್ಜಾ ಮಾಡುವ ವಿಧಾನ:
ಮೊದಲು ಓವನ್ 400 ಡಿಗ್ರಿ ಸೆಲ್ಸಿಯಸ್ ನಲ್ಲಿಟ್ಟುಕೊಳ್ಳಿ. ಈ ವೇಳೆ ಈರುಳ್ಳಿಯನ್ನು ಗುಂಡಗೆ ಕತ್ತರಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಆಲಿವ್ ಆಯಿಲ್ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಈ ಮಿಶ್ರಣವನ್ನು ಪಿಜ್ಜಾ ಬೇಸ್ ಗೆ ಹಚ್ಚಿ. 10 ನಿಮಿಷಗಳ ಕಾಲ ಓವನ್ ನಲ್ಲಿ ಬೇಯಿಸಿ. ನಂತ್ರ ಪಿಜ್ಜಾ ಬೇಸ್ ಗೆ ಚೀಸ್ ಲೇಯರ್ ಹಾಕಿ. ಅದ್ರ ಮೇಲೆ ಈರುಳ್ಳಿ, ಉಪ್ಪು, ಬ್ರೊಕೊಲಿ ಹಾಕಿ ಮತ್ತೆ 15 ನಿಮಿಷ ಬೇಯಿಸಿ. ಪಿಜ್ಜಾ ಬೇಸ್ ಮೇಲೆ ಹಾಕಿದ ಎಲ್ಲ ವಸ್ತು ಮೆಲ್ಟ್ ಆದ ಮೇಲೆ ತೆಗೆಯಿರಿ. ನಂತ್ರ ಅದನ್ನು 6 ತುಂಡುಗಳಾಗಿ ಕತ್ತರಿಸಿ. ಮರಿನಾರಾ ಸಾಸ್ ಹಾಕಿ ಸವಿಯಿರಿ.