ಹಣ್ಣು ಅಂದ್ರೆ ಮಾರು ದೂರ ಓಡ್ತಾರೆ ಮಕ್ಕಳು. ಹಾಗೆ ಐಸ್ ಕ್ರೀಂ ಅಂದ್ರೆ ಬಾಯಿ ಚಪ್ಪರಿಸಿಕೊಂಡು ಹತ್ತಿರ ಬರ್ತಾರೆ. ಒಂದು ಕಪ್ ಐಸ್ ಕ್ರೀಂ ಕೊಟ್ಟರೆ ಅವರಿಗೆ ಸಾಕಾಗೋದಿಲ್ಲ. ಇನ್ನೂ ಬೇಕು ಎನ್ನುವ ಹಠ ಮಾಮೂಲಿ. ಹೊರಗಿನ ಐಸ್ ಕ್ರೀಂ ಆರೋಗ್ಯ ಹಾಳುಮಾಡುತ್ತೆ ಎಂಬ ಭಯ ಇರುವ ಪಾಲಕರು ಮನೆಯಲ್ಲಿಯೇ ಸುಲಭವಾಗಿ ಐಸ್ ಕ್ರೀಂ ಸಿದ್ಧಪಡಿಸಿ ಮಕ್ಕಳಿಗೆ ನೀಡಿ.
ಮಿಕ್ಸ್ ಫ್ರುಟ್ಸ್ ಐಸ್ ಕ್ರೀಂ ಗೆ ಬೇಕಾಗುವ ಸಾಮಗ್ರಿ:
ಒಂದು ಕಪ್ ಕಿತ್ತಳೆ ರಸ
ಒಂದು ಕಪ್ ಅನಾನಸ್ ರಸ
½ ಕಪ್ ದಾಳಿಂಬೆ ರಸ
½ ಕಪ್ ಆಪಲ್ ಜ್ಯೂಸ್
½ ಕಪ್ ದ್ರಾಕ್ಷಿ ರಸ
ಎರಡು ಕಪ್ ಹಾಲು
ನಿಂಬೆ ರಸ ಒಂದು ಚಮಚ
ಮಿಕ್ಸ್ ಫ್ರುಟ್ಸ್ ಐಸ್ ಕ್ರೀಂ ಮಾಡುವ ವಿಧಾನ:
ಕಿತ್ತಳೆ ರಸ, ಅನಾನಸ್ ರಸ, ದಾಳಿಂಬೆ ರಸ, ಆಪಲ್ ರಸ ಹಾಗೂ ದ್ರಾಕ್ಷಿ ರಸ, ನಿಂಬೆ ರಸವನ್ನು ಬಾಣಲೆಯಲ್ಲಿ ಹಾಕಿ ಕುದಿಸಿ. ಒಂದು ಕಪ್ ರಸ ಅರ್ಧ ಕಪ್ ಆಗುವವರೆಗೆ ಕುದಿಸಿ. ಕುದಿಸಿದ ರಸ ಆರಿದ ನಂತ್ರ, ಮೊದಲೆ ಕುದಿಸಿ ಆರಿಸಿದ ಹಾಲನ್ನು ಅದಕ್ಕೆ ಮಿಕ್ಸ್ ಮಾಡಿ, ಮಿಕ್ಸಿ ಮಾಡಿ. ನಂತ್ರ ಫ್ರಿಜ್ ನಲ್ಲಿಡಿ. ಅದು ಸ್ವಲ್ಪ ಗಟ್ಟಿಯಾಗ್ತಾ ಇದ್ದಂತೆ, ಅದನ್ನು ತೆಗೆದು ಮತ್ತೆ ಮಿಕ್ಸಿ ಮಾಡಿ. ಮತ್ತೆ ಫ್ರಿಜ್ ನಲ್ಲಿಡಿ. ಇದು ಗಟ್ಟಿಯಾದ ನಂತ್ರ ಸ್ಟ್ರಾಬೆರಿ ಸಾಸ್ ಅಥವಾ ಚಾಕೊಲೇಟ್ ಸಾಸ್ ಹಾಕಿ ಸರ್ವ್ ಮಾಡಿ.