ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ ಸುಲಭ.
ತೆಂಗಿನಕಾಯಿ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥ:
2 ಕಪ್ ಕೊಬ್ಬರಿ
¼ ಕಪ್ ಬೆಲ್ಲ
ಗಸಗಸೆ ¼ ಕಪ್
ಒಂದು ಕಪ್ ಸಕ್ಕರೆ
ಒಂದು ಚಮಚ ಏಲಕ್ಕಿ ಪುಡಿ
ತುಪ್ಪ ಸ್ವಲ್ಪ
ಅಲಂಕಾರಕ್ಕೆ ಒಣ ಹಣ್ಣುಗಳು
ತೆಂಗಿನಕಾಯಿ ಚಿಕ್ಕಿ ಮಾಡುವ ವಿಧಾನ:
ಒಂದು ಪಾತ್ರೆಗೆ ತೆಂಗಿನಕಾಯಿ ತುರಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಹುರಿದ ತೆಂಗಿನಕಾಯಿ ತುರಿಯನ್ನು ಹಾಕಿ.
ನಂತ್ರ ಗಸಗಸೆ ಹಾಕಿ ಸ್ವಲ್ಪಹೊತ್ತು ಹುರಿಯಿರಿ. ಇದಕ್ಕೆ ಬೆಲ್ಲ, ಸಕ್ಕರೆ ಹಾಕಿ 3-4 ನಿಮಿಷ ಬೇಯಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಕೈ ಆಡಿಸಿ. ಇದನ್ನು ಚಿಕ್ಕಿ ಅಚ್ಚಿನಲ್ಲಿ ಹಾಕಿ ಫ್ರಿಜ್ ನಲ್ಲಿ ಇಡಿ.
ಸ್ವಲ್ಪ ಸಮಯದಲ್ಲಿಯೇ ಚಿಕ್ಕಿ ರೆಡಿ. ಅದರ ಮೇಲೆ ಒಣ ಹಣ್ಣನ್ನಿಟ್ಟು ಅಲಂಕರಿಸಿ ಸರ್ವ್ ಮಾಡಿ.