ಮಾಸ್ಕೋದಿಂದ ಢಾಕಾಗೆ ಫ್ಲೈಟ್ನಲ್ಲಿದ್ದ ಬಿಮಾನ್ ಬಾಂಗ್ಲಾದೇಶದ ವಿಮಾನವೊಂದರ ಪೈಲಟ್ ಒಬ್ಬರಿಗೆ ಕಾಕ್ಪಿಟ್ನಲ್ಲೇ ಹೃದಯಾಘಾತವಾಗಿ ವಿಮಾನವನ್ನು ನಾಗ್ಪುರದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
ಛತ್ತೀಸ್ಘಡದ ರಾಯ್ಪುರದ ನೆತ್ತಿ ಮೇಲೆ ಹಾರಾಡುತ್ತಿದ್ದ ವಿಮಾನವು ಕೋಲ್ಕತ್ತಾದ ಎಟಿಸಿಯೊಂದಿಗೆ ಸಂಪರ್ಕಕ್ಕೆ ಬಂದಿದೆ. ಕೂಡಲೇ ಪ್ರತಿಸ್ಪಂದಿಸಿದ ಕೋಲ್ಕತ್ತಾ ವಿಮಾನ ನಿಲ್ದಾಣವು ನಾಗ್ಪುರದಲ್ಲಿ ಲ್ಯಾಂಡ್ ಆಗಲು ಪೈಲಟ್ಗಳಿಗೆ ಸೂಚಿಸಿದೆ. ಕೂಡಲೇ ವಿಮಾನದ ಕ್ಯಾಪ್ಟನ್ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಪ್ರಯಾಣಿಕರನ್ನೂ ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ.
ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ
ಕೋವಿಡ್ ಕಾರಣದಿಂದ ಬಹಳ ದಿನಗಳಿಂದ ಭಾರತಕ್ಕೆ ವಿಮಾನಯಾನ ಸೇವೆ ಸ್ಥಗಿತಗೊಳಿಸಿದ್ದ ಬಿಮಾನ್ ಬಾಂಗ್ಲಾದೇಶ್ ಇತ್ತೀಚೆಗಷ್ಟೇ ಕೋಲ್ಕತ್ತಾ ಹಾಗೂ ದೆಹಲಿಗೆ ವಿಮಾನಯಾನ ಸೇವೆ ಮರು ಆರಂಭಿಸಿದೆ.