ರಾಜಸ್ಥಾನದ ರಾಂಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದಷ್ಟು ಹೊತ್ತು ಗುಣಮಟ್ಟದ ಸಮಯ ಕಳೆದ ಅಪ್ಪ-ಮಗಳ ಜೋಡಿಯೊಂದು, ಈ ವೇಳೆ ತಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದ ಪ್ರಾಣಿ- ಪಕ್ಷಿಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಆದಿತ್ಯ ಸಿಂಗ್ ಹೆಸರಿನ ಈ ವ್ಯಕ್ತಿ ತಮ್ಮ ಮಗಳೊಂದಿಗೆ ಕಳೆದ ಕೆಲ ದಿನಗಳಿಂದ ರಾಂಥಂಬೋರ್‌ನಲ್ಲಿ ಜಂಗಲ್ ಸಫಾರಿಯಲ್ಲಿದ್ದಾರೆ.
“ನನ್ನ ಮಗಳು ಶಾಲೆಯನ್ನು ತಪ್ಪಿಸಿಕೊಂಡಿದ್ದಾಳೆ. ಆದರೆ ಇಲ್ಲಿನ ಇನ್ನೂ ಒಳ್ಳೆಯ ಶಾಲೆಯನ್ನು ಕಂಡಿದ್ದಾಳೆ. ಕೆಲ ಟ್ರಿಪ್‌ಗಳಲ್ಲಿ ಹುಲಿಗಳನ್ನು ನೋಡಿದ್ದೇವೆ, ಕೆಲವೊಮ್ಮೆ ಇಲ್ಲ. ನಾವಿಬ್ಬರೂ ಕಾಡಿನಲ್ಲಿ ಸಂತೋಷವಾಗಿ ಒಂದಷ್ಟು ಸಮಯ ಕಳೆದಿದ್ದೇವೆ,” ಎಂದು ಆದಿತ್ಯ ಸಿಂಗ್ ಹೇಳಿಕೊಂಡಿದ್ದಾರೆ.
ಹುಲಿ, ಗರಿ ಬಿಚ್ಚಿದ ನವಿಲು, ಗೂಬೆ, ಕಡವೆಗಳು ಹಾಗೂ ಅರಣ್ಯದ ಪರಿಸರದ ಸುಂದರ ಚಿತ್ರಗಳನ್ನು ಶೇರ್ ಮಾಡಿಕೊಂಡಿರುವ ಆದಿತ್ಯ ಸಿಂಗ್, ತಮ್ಮ 11 ವರ್ಷದ ಮಗಳು ಕಾಡಿನಲ್ಲಿ ಕೆಲ ಸಮಯ ಕಳೆದು ಹೊಸ ವಿಷಯಗಳನ್ನು ಕಲಿತದ್ದಕ್ಕೆ ಸಂತಸಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.