ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಎಲ್ಲಾ ಬ್ಯಾಂಕುಗಳು ಲಾಕರ್‌ಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಪರಿಷ್ಕೃತ ಸೂಚನೆಗಳನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದೆ.
ಈ ನಿಟ್ಟಿನಲ್ಲಿ ತಮ್ಮದೇ ಸ್ವಂತ ಮಂಡಳಿಗಳು ಅನುಮೋದಿಸುವ ನೀತಿ/ಮಾರ್ಗಸೂಚಿಗಳನ್ನು ಸಿದ್ಧಪಡಿಸಿಕೊಳ್ಳಲು ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದೆ.
“ಅಸ್ಥಿತ್ವದಲ್ಲಿರುವ ಹಾಗೂ ಹೊಸ ಡೆಪಾಸಿಟ್ ಲಾಕರ್ ಗಳು ಮತ್ತು ವಸ್ತುಗಳನ್ನು ಸುರಕ್ಷಿತವಾಗಿ ಇಡುವ ವ್ಯವಸ್ಥೆಗಳಿಗೆ ಅನ್ವಯವಾಗುವಂತೆ ಪರಿಷ್ಕೃತ ಸೂಚನೆಗಳು ಜನವರಿ 1, 2022ರಿಂದ ಜಾರಿಗೆ ಬರಲಿವೆ,” ಎಂದ ಆರ್‌ಬಿಐ, ಗ್ರಾಹಕರಿಗೆ ವಿವೇಚನಾಯುತ ನಿರ್ಣಯಗಳನ್ನು ಕೈಗೊಳ್ಳಲು ಅನುವಾಗುವಂತೆ ಎಲ್ಲಾ ಬ್ಯಾಂಕುಗಳು ತಮ್ಮ ಶಾಖೆಗಳಲ್ಲಿರುವ ಖಾಲಿ ಲಾಕರ್‌ಗಳ ವಿವರಗಳನ್ನು ಪಟ್ಟಿ ಮಾಡಬೇಕೆಂದು ಸೂಚಿಸಿದ್ದು, ಲಾಕರ್‌ಗಳನ್ನು ಒದಗಿಸುವ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದೆ.
ಲಾಕರ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮುಂದಿನ ಆರು ತಿಂಗಳ ಒಳಗೆ ಏಕರೂಪ ನಿಯಮಗಳನ್ನು ರಚಿಸಲು ಆರ್‌ಬಿಐಗೆ ನ್ಯಾಯಾಧೀಶರಾದ ಶಾಂತನಗೌಡರ್ ಹಾಗೂ ವಿನೀತ್ ಸರಣ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಫೆಬ್ರವರಿಯಲ್ಲಿ ಆದೇಶಿಸಿತ್ತು.
ಲಾಕರ್‌ಗಳ ಒಳಗಿರುವ ಸರಕು ಕಳೆದುಹೋದಲ್ಲಿ/ಹಾನಿಯಾದಲ್ಲಿ ಅದಕ್ಕೆ ಬ್ಯಾಂಕುಗಳು ಎಷ್ಟು ಹೊಣೆಗಾರರು ಎಂಬ ಬಗ್ಗೆ ಆರ್‌ಬಿಐ ಸೂಕ್ತವಾದ ನಿಯಮಗಳನ್ನು ಹೊರತರುವ ಸಾಧ್ಯತೆ ಇದೆ.