alex Certify ನಗು ಉಕ್ಕಿಸುತ್ತೆ ʼಹೋಂ ವರ್ಕ್‌ʼ ಮಾಡಿ ಸುಸ್ತಾಗಿದ್ದ ಪುಟ್ಟ ಕಂದ ಆಡಿದ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ಉಕ್ಕಿಸುತ್ತೆ ʼಹೋಂ ವರ್ಕ್‌ʼ ಮಾಡಿ ಸುಸ್ತಾಗಿದ್ದ ಪುಟ್ಟ ಕಂದ ಆಡಿದ ಮಾತು

ಹೋಮ್​ ವರ್ಕ್​ ದ್ವೇಷಿಗಳ ಸಂಖ್ಯೆ ದೊಡ್ಡದಿದೆ. ಮಕ್ಕಳ ಕಲಿಕೆ ಚೆನ್ನಾಗಿರಲಿ ಎಂದು ಶಿಕ್ಷಕರು ಹೋಮ್​ ವರ್ಕ್​ ಕೊಡುವುದು ಸಾಮಾನ್ಯ. ಆದರೆ, ಸಾಕಷ್ಟು ಮಕ್ಕಳಿಗೆ ಅದು ಇಷ್ಟವಾಗದ ವಿಚಾರ. ಕೆಲವರು ಹತಾಶೆ ತೋರಿಸುವುದೂ ಉಂಟು. ಆಟವಾಡಲು ಹೆಚ್ಚು ಆಸಕ್ತರಾದ ಮಕ್ಕಳಿಗೆ ಹೋಮ್​ ವರ್ಕ್​ ಒಂದು ರೀತಿಯ ಒತ್ತಡ. ಈ ವರ್ಗಕ್ಕೆ ಸೇರಿದ ಪುಟ್ಟ ಹುಡುಗನ ಹತಾಶೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೋಮ್​ ವರ್ಕ್​ ಮುಗಿಸುವಂತೆ ತಾಯಿ ಸೂಚಿಸುತ್ತಾರೆ, ಆಗ ಮಗ ತಾಳ್ಮೆ ಕಳೆದುಕೊಂಡು ಬೇಸರದಿಂದ ತನ್ನ ಪೆನ್ಸಿಲ್​ ಅನ್ನು ಪುಸ್ತಕಕ್ಕೆ ಬಡಿಯುತ್ತಾ ಗೊಣಗುವುದು ಕಂಡುಬರುತ್ತದೆ. ಪ್ರಪಂಚವೇ ಸಾಕೆಂಬ ಮಗುವಿನ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ.

ಹೋಮ್​ ವರ್ಕ್​ ಮಾಡಲು ಕೇಳಿದಾಗ ಮಗುವು ಕಿರಿಕಿರಿಗೊಂಡು ಮಾತನಾಡುತ್ತಾನೆ, ಮಮ್ಮಿ, ಮೈ ಪರಿಶಾನ್​ ಹೋ ರಹಾ ಹೂಂ, ಮೈ ದುನಿಯಾ ಮೇ ಕ್ಯೂಂ ಆಯಾ ಹೂಂ. ಮೈ ದುನಿಯಾ ಸೇ ನಿಕಲ್​ ಜಾವೂಂಗಾ, ನಿಕಲ್​ ಜಾವೂಂಗ ಎಂದು ಪೆನ್ಸಿಲ್​ ಅನ್ನು ಪುಸ್ತಕಕ್ಕೆ ಬಡಿಯುತ್ತಾನೆ.

ತಾಯಿಯು ಕ್ಯುಂ ನಿಕಲ್​ ಜಾವೋಗೆ ಎಂದು ಕೇಳಿದಾಗ, ಮುಜೆ ದುನಿಯಾ ಮೇ ಮನ್​ ನಹೀ ಲಗ್ತಾ ಎಂದು ಉತ್ತರಿಸುತ್ತಾನೆ. ಅವನ ಉತ್ತರವನ್ನು ಕೇಳಿ ಅವನ ತಾಯಿಗೆ ನಗು ಉಕ್ಕಿ ಬರುತ್ತದೆ.

ಈ ವಿಡಿಯೋ ಕಂಡ ನೆಟ್ಟಿಗರಿಗೆ ನಗು ತಡೆಯಲಾಗಿಲ್ಲ. ಅನೇಕರು ಕಾಮೆಂಟ್​ ಮಾಡಿದ್ದರೆ. ಇನ್ನು ಕೆಲವರು ಇಂತಹ ಚಿಕ್ಕ ಮಕ್ಕಳು ಈ ವಿಷಯಗಳನ್ನು ಎಲ್ಲಿಂದ ಕಲಿಯುತ್ತಾರೆ ಎಂದು ಆಶ್ಚರ್ಯ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...