alex Certify ಗಜರಾಜನ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತ: ಕ್ಯೂಟ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಜರಾಜನ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತ: ಕ್ಯೂಟ್ ವಿಡಿಯೋ ವೈರಲ್

ಭೂಮಿಯ ಮೇಲಿನ ಅತ್ಯಂತ ಮುದ್ದಾದ ಪ್ರಾಣಿಗಳಲ್ಲಿ ಆನೆ ಕೂಡ ಒಂದು. ಇವುಗಳು ಸೌಮ್ಯ ಸ್ವಭಾವ ಹಾಗೂ ಅತ್ಯಂತ ಬುದ್ಧಿವಂತ ಪ್ರಾಣಿ ಕೂಡ ಹೌದು. ಆನೆಗಳ ಕೆಲವೊಂದು ತಮಾಷೆಯ ವಿಡಿಯೋಗಳನ್ನು ನೋಡಿದ್ರೆ ಮನಸ್ಸಿನ ಭಾರ ಕಡಿಮೆಯಾದಂತಾಗುತ್ತದೆ. ಇದೀಗ ಇಂಥದ್ದೆ ಒಂದು ಉಲ್ಲಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಬ್ ಕಟ್ ಹೊಂದಿರುವ ಆನೆಯ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆನೆಯು ಮಾವುತನಿಂದ ಕೂದಲು ಬಾಚಿಕೊಳ್ಳುತ್ತಿರುವುದನ್ನು ನೋಡಬಹುದು. ಈ ಆನೆಯು ಬಾಬ್ ಕಟ್ ಕೂದಲನ್ನು ಹೊಂದಿದ್ದು, ನೋಡಲು ಬಹಳ ಸುಂದರವಾಗಿ ಕಾಣುತ್ತಿದೆ. ಅದರ ಹಣೆಯ ಮೇಲೆ ದೊಡ್ಡ ತಿಲಕವನ್ನು ಕೂಡ ಇಡಲಾಗಿದೆ.

ಮದುವೆಯಾಗುವ ವಧುಗೆ ಸ್ತನ, ಸೊಂಟ, ಪಾದದ ಅಳತೆ ಇಷ್ಟೇ ಇರಬೇಕೆಂದು ವಿಲಕ್ಷಣ ವೈವಾಹಿಕ ಜಾಹೀರಾತು ನೀಡಿದ ಭೂಪ

ಮಾವುತ ಆನೆಯ ಕೂದಲು ಬಾಚುತ್ತಿದ್ರೆ, ಅವನಿಗೆ ಸುಲಭವಾಗಲಿ ಎಂದು ತನ್ನ ಕಾಲನ್ನು ನೆಲಕ್ಕೆ ಊರಿ ಬಾಗಿ ನಿಂತಿದೆ. ಮಾವುತ ಆನೆಯ ಕೂದಲು ಬಾಚಿಯಾಗುತ್ತಿದ್ದಂತೆ, ಕುಳಿತಲ್ಲಿಂದ ಎದ್ದು ನಿಂತಿದೆ. ಈ ವಿಡಿಯೋ ತಮಿಳುನಾಡಿನ ಕೊಯಮತ್ತೂರಿನ ತೆಕ್ಕಂಪಟ್ಟಿ ಗ್ರಾಮದ್ದು ಎಂದು ತಿಳಿದು ಬಂದಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ ಇನ್ನು ಆನೆಯ ಬಾಬ್ ಕಟ್ ನೋಡಿದ ನೆಟ್ಟಿಗರಂತೂ ಮನಸೋತಿದ್ದಾರೆ. ಅಯ್ಯೋ, ಎಷ್ಟು ಮುದ್ದಾಗಿದ್ದಾನೆ ಗಜರಾಜ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...