ಮಹೀಂದ್ರಾ ಎಕ್ಸ್ಯುವಿ 700 ಎಸ್ಯುವಿ ಕೇವಲ 1 ಗಂಟೆ ಅವಧಿಯಲ್ಲಿ 25 ಸಾವಿರ ಬುಕ್ಕಿಂಗ್ ಕಂಡಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇದು ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಬಹುದೊಡ್ಡ ಯಶಸ್ಸು ಎಂದು ಕಂಪನಿ ಹೇಳಿದೆ.
ಮಹೀಂದ್ರಾ ಎಕ್ಸ್ಯುವಿ 700 ಇಂಟ್ರಡ್ಯೂಸರಿ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು. ಮೊದಲ 25 ಸಾವಿರ ಬುಕ್ಕಿಂಗಳಿಗೆ ಮಾತ್ರ ಈ ಆರಂಭಿಕ ಬೆಲೆ ಇರಲಿದೆ ಎಂದು ಕಂಪನಿ ಈ ಹಿಂದೆಯೇ ಹೇಳಿದೆ. ಹೊಸ ಎಕ್ಸ್ಯುವಿ700 ಬೆಲೆಯನ್ನು 12.49 ಲಕ್ಷ ರೂಪಾಯಿಗೆ ಪರಿಷ್ಕರಿಸಲಾಗಿದೆ. ಮೂಲ ರೂಪಾಂತರಕ್ಕಿಂತ ಕಂಪನಿಯು 50 ಸಾವಿರ ರೂಪಾಯಿ ಏರಿಕೆ ಮಾಡಿದೆ.
2700 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಟಾಯ್ಲೆಟ್ ಪತ್ತೆ…!
ಎಕ್ಸ್ಯುವಿ ಬುಕ್ಕಿಂಗ್ ನಾಳೆ ಬೆಳಗ್ಗೆ 10 ಗಂಟೆಯಿಂದ ಪುನಾರಂಭಗೊಳ್ಳಲಿದೆ. ಗ್ರಾಹಕರು ತಮ್ಮಿಷ್ಟದ ಎಕ್ಸ್ಯುವಿಯನ್ನು ಡೀಲರ್ಶಿಪ್ ಇಲ್ಲವೇ ಡಿಜಿಟಲ್ ವೇದಿಕೆಯ ಮೂಲಕ ಬುಕ್ ಮಾಡಬಹುದಾಗಿದೆ.