ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನಮ್ರತಾ ಪುತ್ರಿ ಸಿತಾರಾ ಘಟ್ಟನಮೇನಿ ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಯೊಂದಕ್ಕೆ ನೀಡುತ್ತಿರೋದಾಗಿ ಹೇಳಿದ್ದಾರೆ.
ಸಿತಾರಾ ಆಭರಣದ ಬ್ರ್ಯಾಂಡ್ಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದು ಹೈದರಾಬಾದ್ನ ಪಂಚತಾರಾ ಹೋಟೆಲ್ನಲ್ಲಿ ತಮ್ಮ ಪೋಟೋಶೂಟ್ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ಸಿತಾರಾ ತಾಯಿ ನಮ್ರತಾ ಕೂಡ ಹಾಜರಿದ್ದರು.
ಮಾಧ್ಯಮದವರ ಜೊತೆ ಈ ವೇಳೆ ಮಾತನಾಡಿದ ಸಿತಾರಾ, ನನಗೆ ಸಿನಿಮಾಗಳನ್ನು ನೋಡೋದು ಅಂದರೆ ತುಂಬಾನೇ ಇಷ್ಟ. ಅಲ್ಲದೇ ಸಿನಿಮಾಗಳಲ್ಲಿ ನಟಿಸುವ ಬಗ್ಗೆಯೂ ನನಗೆ ಆಸಕ್ತಿಯಿದೆ. ಅಲ್ಲದೇ ನನಗೆ ಇಷ್ಟೊಂದು ಆತ್ಮವಿಶ್ವಾಸ ಮೂಡಲು ಕಾರಣ ನನ್ನ ತಾಯಿ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನಲ್ಲಿ ಸಿಗ್ನೇಚರ್ ಜ್ಯುವೆಲ್ಲರಿ ಕಲೆಕ್ಷನ್ ಲಾಂಚ್ ಆಗಿದ್ದನ್ನು ನೋಡಿ ನನ್ನ ತಂದೆ ಕೂಡ ತುಂಬಾ ಸಂಭ್ರಮ ಪಟ್ಟಿದ್ದಾರೆ. ಅವರು ಈ ಜಾಹಿರಾತು ವಿಡಿಯೋ ನೋಡುವಾಗ ಭಾವುಕರಾದರು ಎಂದು ಸಿತಾರಾ ಹೇಳಿದ್ರು.
ಇದೇ ವೇಳೆ ಪುತ್ರನ ಬಗ್ಗೆ ಮಾತನಾಡಿದ ಮಹೇಶ್ ಬಾಬು ಪತ್ನಿ ನಮ್ರತಾ, ಗೌತಮ್ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಬಹುದು. ಆದರೆ ಸದ್ಯಕ್ಕೆ ಆತ ಉನ್ನತ ವ್ಯಾಸಂಗದಲ್ಲಿದ್ದಾನೆ ಎಂದು ಹೇಳಿದ್ದಾರೆ.