ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತ ತಲುಪಿದೆ. ಮೋದಿ & ಷಾ ಜೋಡಿಗೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿ ಅವರದೇ ಪಕ್ಷದ ಶಾಸಕರನ್ನು ತಿರುಗಿ ಬೀಳುವಂತೆ ಮಾಡಿ, ಶಿವಸೇನೆಗೆ ಅಧಿಕಾರ ಕೊಟ್ಟು ಶಾಕ್ ನೀಡಲಾಗಿದೆ.
ಇದೀಗ ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಬಳಿಕ ತಮಗೆ ಮೀಸಲಾದ ಕಚೇರಿಯಲ್ಲಿ ಕೆಲಸ ಆರಂಭಿಸಿದ್ದಾರೆ. ಗುರುವಾರ ಅವರು ರಾಜ್ಯ ಸಚಿವಾಲಯ ಮಂತ್ರಾಲಯದಲ್ಲಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
BREAKING: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಅಪಘಾತದಲ್ಲಿ 8 ಪ್ರಯಾಣಿಕರಿಗೆ ಗಾಯ
ಶಿಂಧೆ ಅಧಿಕಾರ ಸ್ವೀಕರಿಸುವ ಮುನ್ನ ಅಲಂಕರಿಸಿದ ಮುಖ್ಯಮಂತ್ರಿ ಕಚೇರಿಯಲ್ಲಿ ಪೂಜೆ ನಡೆಯಿತು. ಅವರ ಕೊಠಡಿಯಲ್ಲಿ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ದೊಡ್ಡ ಛಾಯಾಚಿತ್ರ ಮತ್ತು ಅದರ ಪಕ್ಕದಲ್ಲಿ ಶಿಂಧೆ ಅವರ ಆಪ್ತ ಆನಂದ್ ದಿಘೆ ಅವರ ಚಿತ್ರವಿತ್ತು.
ಸಚಿವಾಲಯದ ಕಟ್ಟಡ ಪ್ರವೇಶಿಸಿದ ತಕ್ಷಣ ಅವರು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಬಾಳಾ ಠಾಕ್ರೆ ಫೋಟೋ ಬಳಕೆಗೆ ಉದ್ಧವ್ ಬಣ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಆಕ್ಷೇಪಕ್ಕೆ ಶಿಂಧೆ ನೇತೃತ್ವದ ಶಾಸಕರ ಬಣದ ವಕ್ತಾರ ದೀಪಕ್ ಕೇಸರ್ಕರ್ ತಿರುಗೇಟು ನೀಡಿದ್ದಾರೆ. ಬಾಳಾ ಠಾಕ್ರೆ ಯಾರ ಸ್ವತ್ತಲ್ಲ. ಬಾಳಾ ಸಾಹೇಬ್ ಅವರು ಇಡೀ ರಾಜ್ಯಕ್ಕೆ ಸೇರಿದವರು ಮತ್ತು ಈ ಸತ್ಯವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಸದ ರಾವತ್, ಶರದ್ ಪವಾರ್ಗೆ ಹತ್ತಿರ ಎಂದು ಟೀಕಿಸಿದ ಅವರು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಭಾವನಾ ಗವಾಲಿ ಅವರನ್ನು ಬದಲಿಸುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಿರ್ಧಾರವನ್ನು ಕೇಸರ್ಕರ್ ಟೀಕಿಸಿದರು. ಇಂತಹ ಕ್ರಮದಿಂದ ನೀವು ಮಹಿಳೆಯರನ್ನು ಅವಮಾನಿಸುತ್ತೀದ್ದಿರಿ. ಅವರು ಐದು ಬಾರಿ ಸಂಸದರಾಗಿದ್ದಾರೆ, ಅವರು ಶಿವಸೇನೆ ಧ್ವಜವನ್ನು ಎತ್ತರಕ್ಕೆ ಹಿಡಿದಿದ್ದಾರೆ ಎಂದು ಹೇಳಿದರು. ಲೋಕಸಭೆಯಲ್ಲಿ ಗವಾಲಿ ಬದಲಿಗೆ ಬುಧವಾರ ಉದ್ಧವ್ ಠಾಕ್ರೆ ನೇತೃತ್ವದ ಬಣವು ರಾಜನ್ ವಿಚಾರೆಯನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನಾಮನಿರ್ದೇಶನ ಮಾಡಿದೆ.