alex Certify Big News: ಶಿವಸೇನೆ ಶಾಸಕನ ಆಪ್ತ ಕಾರ್ಯದರ್ಶಿ ಮೇಲೆ ಗುಂಡಿನ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಶಿವಸೇನೆ ಶಾಸಕನ ಆಪ್ತ ಕಾರ್ಯದರ್ಶಿ ಮೇಲೆ ಗುಂಡಿನ ದಾಳಿ

Maharashtra: Shiv Sena MLA's PA shot, injured in Ahmednagar districtಅಹ್ಮದ್‌ನಗರ: ಶಿವಸೇನೆ ಶಾಸಕ ಶಂಕರರಾವ್ ಗಡಾಖ್ ಅವರ ಆಪ್ತ ಕಾರ್ಯದರ್ಶಿಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ರಾಜಾಲೆ (37) ಮೇಲೆ ಗುಂಡಿನ ದಾಳಿ ನಡೆದಿದ್ದು, ಗುಂಡುಗಳು ರಾಜಾಲೆ ಅವರ ಕಾಲಿಗೆ ಮತ್ತು ಸೊಂಟದ ಕೆಳಗೆ ತಗುಲಿವೆ. ಆರೋಪಿ ಗುತ್ತಿಗೆದಾರ ನಿತಿನ್ ಶಿರ್ಸತ್ ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಸೋನೈನಲ್ಲಿ ಈ ಘಟನೆ ನಡೆದಿದೆ. ಕಂಟ್ರಿಮೇಡ್ ಪಿಸ್ತೂಲ್ ನಿಂದ ಎರಡು ಗುಂಡು ಹಾರಿಸಲಾಗಿದೆ. ಕಾರ್ಮಿಕ ಗುತ್ತಿಗೆ ಪಡೆಯಲು ರಾಜಾಲೆ ಜತೆ ಆರೋಪಿ ನಿತಿನ್ ಜಗಳವಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...