alex Certify ಕೆಂಪು ಪೇರಲೆ ಹಣ್ಣನ್ನು ಬಳಸಿ ವಿಶಿಷ್ಟ ಕೇಕ್​ ತಯಾರಿಸಿದ ಬೇಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಪೇರಲೆ ಹಣ್ಣನ್ನು ಬಳಸಿ ವಿಶಿಷ್ಟ ಕೇಕ್​ ತಯಾರಿಸಿದ ಬೇಕರಿ

ಐಕಾನಿಕ್​ ಕಯಾನಿ ಬೇಕರಿ ತಮ್ಮ ಉತ್ಪನ್ನಗಳನ್ನು ವಿಶಿಷ್ಟವಾದ ಕೇಕ್​ ತಯಾರಿಸಲು ಬಳಸುತ್ತಿದ್ದು, ಪುಣೆ ಜಿಲ್ಲೆಯ ಪುರಂದರ ತೆಹಸಿಲ್​ನಲ್ಲಿ ಕೆಂಪು ಪೇರಲ ಹಣ್ಣನ್ನು ಬೆಳೆಯುತ್ತಿರುವ ರೆೈತರನ್ನು ಹುರಿದುಂಬಿಸಿದೆ.

ರತ್ನದಿಪ ಪೇರಲೆ ಎಂಬ ಹೆಸರಿನ ಹಣ್ಣಿನ ತಳಿಯನ್ನು ಮಹಾರಾಷ್ಟ್ರದ ಪುರಂದರ ತೆಹಸಿಲ್​ನಲ್ಲಿ ಸಾಂಪ್ರದಾಯಿಕವಾಗಿ ರೈತರು ಬೆಳೆಯುತ್ತಾರೆ. ಅದರ ಹಿತವಾದ ರುಚಿ ಮತ್ತು ಒಳಗಿನ ಗಾಢ ಗುಲಾಬಿ ತಿರುಳಿನ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

‘ಪುರಂದರ ಕೇಕ್​’ ಎಂಬ ಬ್ರಾಂಡ್​ನೊಂದಿಗೆ ವಿಶಿಷ್ಟವಾದ ಮೊಟ್ಟೆ ರಹಿತ ಪೇರಲೆ ತಯಾರಿಕೆಯನ್ನು ಪರಿಚಯಿಸುತ್ತಿದೆ. ಕಳೆದ ತಿಂಗಳಿನಿಂದ ತಯಾರಿಸಲು ಆರಂಭಿಸಿದ ಈ ಕೇಕ್​ ಗೆ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬೇಕರಿಯ ಮಾಲೀಕರು ಹೇಳಿದ್ದಾರೆ.

“ಪುರಂದರ ಹೆೈಲ್ಯಾಂಡ್ಸ್​ ಫಾರ್ಮರ್ಸ್​ ಪ್ರೊಡ್ಯೂಸರ್ಸ್”​ ಕಂಪನಿಯಿಂದ ತಯಾರಿಸಲ್ಪಟ್ಟ ಕೆಂಪು ಪೇರಲೆ ಬ್ರೆಡ್​ ಸ್ಪ್ರೆಡ್​ ಅನ್ನು ಬಳಸಿ ಕೇಕ್​ ತಯಾರಿಸಲಾಗುತ್ತದೆ, ಅವರು ಕೃಷಿ ಮತ್ತು ಸಂಬಂಧಿತ ಅಭ್ಯಾಸಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ ಎಂದು ಕಂಪನಿಯ ಅಧ್ಯಕ್ಷರಾದ ರೋಹನ್​ ಉರ್ಸಲ್​ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಬೆಳೆಯುವ ಅಂಜೂರ, ಸೀತಾಫಲ ಮತ್ತು ಕೆಂಪು ಪೇರಲೆಯನ್ನು ವಿಶ್ವ ಮಾರುಕಟ್ಟೆಗೆ ಕೊಂಡೊಯ್ಯುವುದು ಪಿಎಚ್​ಎಫ್​ಪಿಸಿ ಸ್ಥಾಪನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...