alex Certify ಫೇಸ್ ​ಬುಕ್​ ಲೈವ್​ನಲ್ಲಿ ಪುತ್ರನ ಮದುವೆ..! ಮನೆಯಲ್ಲೇ ಕೂತು ಅಕ್ಷತೆ ಹಾಕಿದ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ ​ಬುಕ್​ ಲೈವ್​ನಲ್ಲಿ ಪುತ್ರನ ಮದುವೆ..! ಮನೆಯಲ್ಲೇ ಕೂತು ಅಕ್ಷತೆ ಹಾಕಿದ ಪೋಷಕರು

ಕೊರೊನಾ ವೈರಸ್​​ ಹರಡುವಿಕೆಯನ್ನ ನಿಯಂತ್ರಣ ಮಾಡುವ ಸಲುವಾಗಿ ಮದುವೆಯಂತಹ ಸಾಂಪ್ರದಾಯಿಕ ಆಚರಣೆಯನ್ನೇ ಬದಲಾವಣೆ ಮಾಡಲಾಗಿದೆ. ಹೆಚ್ಚು ಜನರು ಒಂದೆಡೆ ಸೇರಬಾರದು ಅಂತಾ ಕಡಿಮೆ ಜನಸಂಖ್ಯೆಯಲ್ಲೇ ಮದುವೆಯಾಗಿ ಎಂದು ಸರ್ಕಾರಗಳು ಮಾರ್ಗಸೂಚಿ ಹೊರಡಿಸಿವೆ.

ಈ ಎಲ್ಲದರ ನಡುವೆ ಮಹಾರಾಷ್ಟ್ರ ಥಾಣೆ ಜಿಲ್ಲೆಯ ಕುಟುಂಬವೊಂದು ಸಾವಿರಾರುಗಟ್ಟಲೇ ಕಿಲೋಮೀಟರ್​ ದೂರದಲ್ಲಿ ಕೂತು ತಮ್ಮ ಪುತ್ರನ ಮದುವೆಯನ್ನ ಕಣ್ತುಂಬಿಕೊಂಡಿದೆ..!

ದೊಂಬಿವಿಲಿಯಲ್ಲಿ ವಾಸವಿರುವ ಪೋಷಕರು ಕೆನಡಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪುತ್ರ ಭೂಷಣ್​ ಚೌಧರಿ ಹಾಗೂ ಮಂದೀಪ್​ ಕೌರ್​ರ ಮದುವೆಯನ್ನ ಆನ್​ಲೈನ್​​ನಲ್ಲಿ ನೋಡಿ ಖುಷಿಪಟ್ಟಿದೆ.

ಈ ವಿಶೇಷವಾದ ಮದುವೆಯು ಶನಿವಾರ ನಡೆದಿದೆ. ದೊಂಬಿವಿಲಿಯಲ್ಲಿ ಪುರೋಹಿತರು ಮಂತ್ರಪಠಿಸುತ್ತಿದ್ದರೆ ಕೆನಡಾದಲ್ಲಿದ್ದ ಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡಿದೆ. ಈ ಮದುವೆಯನ್ನ ಫೇಸ್​ಬುಕ್​, ಯುಟ್ಯೂಬ್​​ ನಂತಹ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗಿದೆ.
ಮನೆಯಲ್ಲೇ ಕೂತು ಮದುವೆ ನೋಡುತ್ತಿದ್ದ ಕುಟುಂಬಸ್ಥರು ಸಾಂಕೇತಿಕವಾಗಿ ವಧು-ವರರ ತಲೆಗೆ ಅಕ್ಷತೆ ಕಾಳನ್ನ ಹಾಕಿದ್ರು.

ಪುತ್ರನ ಈ ವಿಶಿಷ್ಠ ಮದುವೆ ವಿಚಾರವಾಗಿ ಮಾತನಾಡಿದ ವರನ ತಂದೆ ಹಿರಾಮನ್​ ಚೌಧರಿ, ಎರಡೂ ಕುಟುಂಬಗಳಿಗೆ ಈ ಮದುವೆಯನ್ನ ಆದಷ್ಟು ಬೇಗ ಮಾಡಿ ಮುಗಿಸಬೇಕೆಂಬ ಹೆಬ್ಬಯಕೆ ಇತ್ತು. ಈ ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಇದಕ್ಕಿಂತ ಬೇರೆ ಒಳ್ಳೆಯ ಮಾರ್ಗ ಕಾಣಲಿಲ್ಲ ಎಂದು ಹೇಳಿದ್ರು. ಅಲ್ಲದೇ ಈ ರೀತಿಯ ಮದುವೆಯಿಂದ ಹಣ ಕೂಡ ವ್ಯರ್ಥವಾಗೋದಿಲ್ಲ ಎಂದು ಚೌಧರಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...