ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಅಬ್ಬರ ಕಂಡುಬಂದಿದೆ. ಒಂದೇ ದಿನ 8 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ.
ಮುಂಬೈನಲ್ಲಿ 7 ಮಂದಿ, ವಸಾಯಿ ವಿರಾರ್ ನಿಂದ ಬಂದ ಒಬ್ಬರಿಗೆ ಸೋಂಕು ತಗುಲಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತ ಒಟ್ಟು 28 ರೋಗಿಗಳು ವರದಿಯಾಗಿದ್ದಾರೆ. ಇವರಲ್ಲಿ 9 ಮಂದಿಯನ್ನು ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿ ಡಿಸ್ಚಾರ್ಜ್ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 684 ಹೊಸ COVID- 19 ಪ್ರಕರಣಗಳು, 686 ಚೇತರಿಕೆ ಮತ್ತು 24 ಸಾವುಗಳು ವರದಿಯಾಗಿವೆ.
ಒಟ್ಟು ಪ್ರಕರಣಗಳು; 66,45,136
ಒಟ್ಟು ಚೇತರಿಕೆ; 64,93,688
ಸಾವಿನ ಸಂಖ್ಯೆ; 1,41,288
ಸಕ್ರಿಯ ಪ್ರಕರಣಗಳು; 6481