alex Certify ‘ಮೋಜಿಗಾಗಿ’ ಅಪಾರ್ಟ್‌ಮೆಂಟ್‌ ಕಡೆಗೆ ದೀಪಾವಳಿ ರಾಕೆಟ್‌ ಬಿಟ್ಟವನ ಮೇಲೆ ಕೇಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೋಜಿಗಾಗಿ’ ಅಪಾರ್ಟ್‌ಮೆಂಟ್‌ ಕಡೆಗೆ ದೀಪಾವಳಿ ರಾಕೆಟ್‌ ಬಿಟ್ಟವನ ಮೇಲೆ ಕೇಸ್…!

ಮಹಾರಾಷ್ಟ್ರದ ಥಾಣೆಯಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಅಪಾರ್ಟ್‌ಮೆಂಟ್‌ಗೆ ಗುರಿಯಾಗಿಸಿ ಪಟಾಕಿ ರಾಕೆಟ್ ಸಿಡಿಸಿದ್ದಾನೆ.

ಈ ಘಟನೆಯ ವೀಡಿಯೊದಲ್ಲಿ ಅಪರಿಚಿತ ಯುವಕ ನೆಲದಿಂದ ವಸತಿ ಕಟ್ಟಡದ ಕಡೆಗೆ ರಾಕೆಟ್‌ಗಳನ್ನು ಹಾರಿಸುವುದನ್ನು ನೋಡಬಹುದು.

ಮಹಾರಾಷ್ಟ್ರದ ಥಾಣೆಯ ಉಲ್ಹಾಸ್‌ನಗರ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ದುಷ್ಕರ್ಮಿ ವಸತಿ ಕಟ್ಟಡದ ಕಡೆಗೆ ಅನೇಕ ರಾಕೆಟ್‌ಗಳನ್ನು ಸಿಡಿಸಿದ್ದಾನೆ ಮತ್ತು ಪಟಾಕಿಗಳು ಜನರ ಬಾಲ್ಕನಿಗಳಿಗೆ ಪ್ರವೇಶಿಸಿ ಅಲ್ಲಿದ್ದ ಜನರನ್ನು ಭಯಭೀತಗೊಳಿಸಿದೆ.

ಕೈಯಲ್ಲಿ ರಾಕೆಟ್ ಪೆಟ್ಟಿಗೆಯೊಂದಿಗೆ ಕಟ್ಟಡದ ಹೊರಗೆ ನಿಂತಿರುವ ವ್ಯಕ್ತಿ ಪಟಾಕಿ ಸಿಡಿಸಿದ ನಂತರ, ದೀಪಾವಳಿ ರಾಕೆಟ್ ಗಳು ಮನೆಯ ಕಿಟಕಿಗಳು ಮತ್ತು ಬಾಲ್ಕನಿಗಳಿಂದ ನೇರವಾಗಿ ಮನೆಗಳನ್ನು ಪ್ರವೇಶಿಸಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಥಾಣೆ ಪೊಲೀಸರು ಅಪರಿಚಿತ ಯುವಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಶೋಧ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...