alex Certify ಪತ್ನಿ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಪತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಪತಿ ಅರೆಸ್ಟ್

ವರದಕ್ಷಿಣೆಗೆ ಆಗ್ರಹಿಸಿ ಮಡದಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಆರೋಪದಲ್ಲಿ 33 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾದಲ್ಲಿ ಜರುಗಿದೆ.

2019ರಲ್ಲಿ ಮದುವೆಯಾದಾಗಿನಿಂದಲೂ ವರದಕ್ಷಿಣಗೆ ಪೀಡಿಸುತ್ತಿದ್ದ ಸತ್ಯೇಂದ್ರ ಓಂಪ್ರಕಾಶ್ ಸಿಂಗ್‌ನ ಕಾಟ ತಾಳಲಾರದೇ ಆತನ ಪತ್ನಿ, 26 ವರ್ಷದ ಆಂಚಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಮನೆ ಖರೀದಿ ಮಾಡಲು ಇನ್ನಷ್ಟು ಹೆಚ್ಚಿನ ಹಣ ಬೇಕೆಂದು ಸತ್ಯೇಂದ್ರ ತನ್ನ ಮಡದಿಯ ಮನೆಯವರ ಬಳಿ ಆಗ್ರಹಿಸಿದ್ದ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಆರೋಪದ ಮೇಲೆ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...