ವರದಕ್ಷಿಣೆಗೆ ಆಗ್ರಹಿಸಿ ಮಡದಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಆರೋಪದಲ್ಲಿ 33 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾದಲ್ಲಿ ಜರುಗಿದೆ.
2019ರಲ್ಲಿ ಮದುವೆಯಾದಾಗಿನಿಂದಲೂ ವರದಕ್ಷಿಣಗೆ ಪೀಡಿಸುತ್ತಿದ್ದ ಸತ್ಯೇಂದ್ರ ಓಂಪ್ರಕಾಶ್ ಸಿಂಗ್‌ನ ಕಾಟ ತಾಳಲಾರದೇ ಆತನ ಪತ್ನಿ, 26 ವರ್ಷದ ಆಂಚಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಮನೆ ಖರೀದಿ ಮಾಡಲು ಇನ್ನಷ್ಟು ಹೆಚ್ಚಿನ ಹಣ ಬೇಕೆಂದು ಸತ್ಯೇಂದ್ರ ತನ್ನ ಮಡದಿಯ ಮನೆಯವರ ಬಳಿ ಆಗ್ರಹಿಸಿದ್ದ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಆರೋಪದ ಮೇಲೆ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.