alex Certify ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ಬೈಕ್​ ಪುಡಿಪುಡಿ ಮಾಡಿದ ಆನೆ: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ಬೈಕ್​ ಪುಡಿಪುಡಿ ಮಾಡಿದ ಆನೆ: ಭಯಾನಕ ವಿಡಿಯೋ ವೈರಲ್

ಆನೆಯೊಂದು ತನ್ನ ಮರಿಗಳ ಜತೆ ರಸ್ತೆ ದಾಟುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಇದು ನಡುಕ ಹುಟ್ಟಿಸುವಂತಿದೆ. ವರದಿಯ ಪ್ರಕಾರ, ದೃಶ್ಯವು ಮಹಾರಾಷ್ಟ್ರದಲ್ಲಿ ಸೆರೆ ಹಿಡಿಯಲಾಗಿದೆ.

ಇದು ಭಯಾನಕವಾಗಿರಲು ಕಾರಣ ಏನೆಂದರೆ ಆನೆ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಮಾರ್ಗಕ್ಕೆ ಅಡ್ಡಿಯಾಗಿದ್ದ ಬೈಕ್‌ ಒಂದನ್ನು ಅದು ಪುಡಿಪುಡಿ ಮಾಡಿದೆ. ಆನೆ ಬರುತ್ತಿರುವುದನ್ನು ನೋಡಿ ವಾಹನ ಸವಾರ ಬೈಕ್​ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಅದು ಆನೆ ಬರುವ ಜಾಗದಲ್ಲಿಯೇ ಇತ್ತು. ಇದನ್ನು ನೋಡಿ ಆವೇಶಗೊಂಡ ಆನೆ ಅದನ್ನು ಕಾಲಿನಿಂದ ಪುಡಿ ಪುಡಿ ಮಾಡಿದೆ.

ಈ ವಿಡಿಯೋದಲ್ಲಿ ಜನರು ಕಿರುಚುವುದನ್ನು ನಾವು ಕೇಳುತ್ತೇವೆ. ಆದರೆ, ಬೈಕ್‌ನಲ್ಲಿ ಯಾರೂ ಕುಳಿತಿಲ್ಲದ ಕಾರಣ ಅನಾಹುತ ತಪ್ಪಿದೆ. ನಿಂತಿದ್ದ ಬೈಕನ್ನು ಪೊದೆಗೆ ಎಸೆದ ಆನೆ ತನ್ನ ಮರಿಗಳ ಜೊತೆ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...