alex Certify ಅಂಡರ್-19 ಟೂರ್ನಿ ಆಡಲು 16 ವರ್ಷವೆಂದು ಸುಳ್ಳು ಹೇಳಿದ 24 ವರ್ಷದ ಕ್ರಿಕೆಟಿಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಡರ್-19 ಟೂರ್ನಿ ಆಡಲು 16 ವರ್ಷವೆಂದು ಸುಳ್ಳು ಹೇಳಿದ 24 ವರ್ಷದ ಕ್ರಿಕೆಟಿಗ….!

ಅಂಡರ್ – 19 ಟೂರ್ನಿಯಲ್ಲಿ ಆಡಲು 24 ವರ್ಷದ ಕ್ರಿಕೆಟಿಗನೊಬ್ಬ ತನಗೆ ಕೇವಲ 16 ವರ್ಷವೆಂದು ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಇಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಾಲೆಗಾಂವ್ ನ ಅಮೋಲ್ ಕೋಲ್ಪೆ ಎಂಬಾತ 1999ರಲ್ಲಿ ಜನಿಸಿದ್ದರೂ ಸಹ ತನ್ನ ಹುಟ್ಟಿದ ವರ್ಷವನ್ನು 2007 ಎಂದು ನಮೂದಿಸಿ ನಕಲಿ ದಾಖಲೆ ಸಲ್ಲಿಸಿದ್ದ. ಈ ಕುರಿತಂತೆ ಪೊಲೀಸರಿಗೆ ದೂರು ಬಂದಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಬಾರಾಮತಿ ಪೊಲೀಸರು ಆತನ ಹಿಂದಿನ ದಾಖಲಾತಿಗಳನ್ನು ಪರಿಹರಿಸಿದ ವೇಳೆ ಸುಳ್ಳು ದಾಖಲಾತಿ ನೀಡಿರುವುದು ಬಹಿರಂಗವಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...