ಅಂಡರ್ – 19 ಟೂರ್ನಿಯಲ್ಲಿ ಆಡಲು 24 ವರ್ಷದ ಕ್ರಿಕೆಟಿಗನೊಬ್ಬ ತನಗೆ ಕೇವಲ 16 ವರ್ಷವೆಂದು ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಇಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಾಲೆಗಾಂವ್ ನ ಅಮೋಲ್ ಕೋಲ್ಪೆ ಎಂಬಾತ 1999ರಲ್ಲಿ ಜನಿಸಿದ್ದರೂ ಸಹ ತನ್ನ ಹುಟ್ಟಿದ ವರ್ಷವನ್ನು 2007 ಎಂದು ನಮೂದಿಸಿ ನಕಲಿ ದಾಖಲೆ ಸಲ್ಲಿಸಿದ್ದ. ಈ ಕುರಿತಂತೆ ಪೊಲೀಸರಿಗೆ ದೂರು ಬಂದಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಬಾರಾಮತಿ ಪೊಲೀಸರು ಆತನ ಹಿಂದಿನ ದಾಖಲಾತಿಗಳನ್ನು ಪರಿಹರಿಸಿದ ವೇಳೆ ಸುಳ್ಳು ದಾಖಲಾತಿ ನೀಡಿರುವುದು ಬಹಿರಂಗವಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.