alex Certify ಕೊರೊನಾ ಹಿನ್ನಲೆ : ವಾರಾಂತ್ಯದಲ್ಲಿ ಲಾಕ್ ಡೌನ್, ಮಾ.15ರ ನಂತ್ರ ಮದುವೆ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹಿನ್ನಲೆ : ವಾರಾಂತ್ಯದಲ್ಲಿ ಲಾಕ್ ಡೌನ್, ಮಾ.15ರ ನಂತ್ರ ಮದುವೆ ರದ್ದು

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ವಾರಾಂತ್ಯದ ಲಾಕ್‌ಡೌನ್ ಘೋಷಿಸಿದೆ. ಕೊರೊನೊ ವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರ 626 ರಿಂದ 1,26,570 ಕ್ಕೆ ಏರಿದೆ. ಕೊರೊನಾ ಕಾರಣ ಜಿಲ್ಲೆಯಲ್ಲಿ ಈವರೆಗೆ 2,140 ಜನರು ಸಾವನ್ನಪ್ಪಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ನಿಷೇಧವನ್ನು ಜಾರಿಗೊಳಿಸಿದ ಜಿಲ್ಲಾಡಳಿತ ಮಾರ್ಚ್ 15 ರಿಂದ ಮದುವೆಗೆ ಅವಕಾಶ ನೀಡುವುದಿಲ್ಲ ಎಂದಿದೆ. ಈಗಾಗಲೇ ಅನುಮತಿ ನೀಡಲಾಗಿರುವ ವಿವಾಹಗಳನ್ನು ಮಾರ್ಚ್ 15 ರೊಳಗೆ ಮುಗಿಸಲು ಅವಕಾಶ ನೀಡಲಾಗಿದೆ.ಇದರ ನಂತರ ಮುಂದಿನ ಆದೇಶದವರೆಗೆ ಯಾವುದೇ ಮದುವೆಗೆ ಅನುಮತಿ ನೀಡಲಾಗುವುದಿಲ್ಲವೆಂದು ಜಿಲ್ಲಾಡಳಿತ ಹೇಳಿದೆ.

ಅಗತ್ಯ ಸೇವೆಗಳ ಅಂಗಡಿಗಳನ್ನು ಹೊರತುಪಡಿಸಿ, ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳನ್ನು ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಮುಚ್ಚಲಾಗುವುದು. ರಾತ್ರಿ 9 ರೊಳಗೆ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗುವುದು. ರಾತ್ರಿ 11 ರವರೆಗೆ ಹೋಂ ಡಿಲೆವರಿಗೆ ಅವಕಾಶ ನೀಡಲಾಗುವುದು. ನಾಸಿಕ್ ನಗರ, ಮಾಲೆಗಾಂವ್ ಮತ್ತು ಇತರ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು, ಕಾಲೇಜುಗಳು, ಕೋಚಿಂಗ್ ತರಗತಿಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ಪೂಜಾ ಸ್ಥಳಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ವಾರಾಂತ್ಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಿದೆ.  ಪೂರ್ವ ನಿರ್ಧಾರಿತ ಪರೀಕ್ಷೆಗಳಾದ ಯುಪಿಎಸ್‌ಸಿ, ಎಂಪಿಎಸ್‌ಸಿ ಈ ಪ್ರದೇಶದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...