alex Certify ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆಗೆ ಡ್ರಮ್ ಬಾರಿಸಿ ವೆಲ್ಕಮ್ ಮಾಡಿದ ಪತ್ನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆಗೆ ಡ್ರಮ್ ಬಾರಿಸಿ ವೆಲ್ಕಮ್ ಮಾಡಿದ ಪತ್ನಿ….!

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಮನೆಗೆ ಸ್ವಾಗತಿಸಲು ಅವರ ಪತ್ನಿ ಡ್ರಮ್ ಬಾರಿಸಿ ಸ್ವಾಗತ ಕೋರಿರುವ ವಿಡಿಯೋ ವೈರಲ್ ಆಗಿದೆ. ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಥಾಣೆಗೆ ಹಿಂದಿರುಗಿದ್ದರಿಂದ ಭವ್ಯವಾದ ಸ್ವಾಗತವನ್ನು ಪಡೆದಿದ್ದಾರೆ.

ಶಿಂಧೆ ಅವರನ್ನು ಅವರ ಮನೆಗೆ ಅಪಾರ ಸಂಖ್ಯೆಯ ಬೆಂಬಲಿಗರು ಬರಮಾಡಿಕೊಂಡರು. ಅವರ ಪತ್ನಿ ಲತಾ ಶಿಂಧೆ ಅವರು ಡ್ರಮ್ ಬಾರಿಸುವ ಮೂಲಕ ಸ್ವಾಗತಿಸಿದರು. ಲತಾ ಶಿಂಧೆ ಡ್ರಮ್ ಬಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳವಾರ ರಾತ್ರಿ 9:30ರ ಸುಮಾರಿಗೆ ನೂತನ ಮುಖ್ಯಮಂತ್ರಿ ಥಾಣೆ ತಲುಪಿದರು. ನೂತನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ತಮ್ಮ ತವರು ನಾಗ್ಪುರಕ್ಕೆ ಮರಳಿದ್ದು, ಅವರಿಗೂ ಸಹ ಭವ್ಯವಾದ ಸ್ವಾಗತ ಕೋರಲಾಯಿತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...