alex Certify ಉದ್ಯಮಿ ಮನೆಯಿಂದ 6 ಕೋಟಿ ಲಪಟಾಯಿಸಿದ ಪೊಲೀಸರ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯಮಿ ಮನೆಯಿಂದ 6 ಕೋಟಿ ಲಪಟಾಯಿಸಿದ ಪೊಲೀಸರ ಸಸ್ಪೆಂಡ್

ಮಹಾರಾಷ್ಟ್ರದ ಥಾಣೆಯಲ್ಲಿ 3 ಪೊಲೀಸ್ ಅಧಿಕಾರಿಗಳು ಸೇರಿದಂತೆ, 10 ಪೊಲೀಸ್ ಕಾನ್ಸಟೇಬಲ್‌ ಗಳನ್ನ ಅಮಾನತ್ತು ಮಾಡಲಾಗಿದೆ. ಸ್ಥಳೀಯ ಉದ್ಯಮಿ ಮನೆಯಿಂದ 6 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಅನ್ನೊ ಆರೋಪ ಇವರ ಮೇಲಿದೆ. ಈ ಆರೋಪದ ಕುರಿತಾಗಿ ಪೊಲೀಸ್ ಕಮಿಷನರ್‌ ಜೈ ಜೀತ್ ಸಿಂಗ್ ತನಿಖೆ ನಡೆಸುತ್ತಿದ್ದಾರೆ.

ಥಾಣೆಯಲ್ಲಿರುವ ಉದ್ಯಮಿ ಮೆಮೆನ್ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ದರೋಡೆ ಮಾಡಿದ್ದಾರೆ ಅನ್ನೋ ದೂರು ದಾಖಲಾಗಿದ್ದು, ಇದನ್ನ ಮಹಾರಾಷ್ಟ್ರದ ಗೃಹಸಚಿವರ ಗಮನಕ್ಕೂ ತರಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಹಾಗೂ ಇಬ್ಬರು ಸಬ್ ಇನ್ಸಪೆಕ್ಟರ್ ಹಾಗೂ ಕೆಲ ಕಾನ್ಸ್‌ಟೇಬಲ್‌ ಇವರೆಲ್ಲ ಸೇರಿ, ಮಧ್ಯರಾತ್ರಿ ತಪಾಸಣೆ ನೆಪದಲ್ಲಿ ಮನೆಗೆ ನುಗ್ಗಿ ಹಣ ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಆರೋಪಿಗಳನ್ನ ಗುರುತಿಸಲಾಗಿದ್ದು ಇನ್ಸಪೆಕ್ಟರ್ ಗೀತಾರಾಮ್ ಶೆವಾಲೆ ಮತ್ತು ಅವರ ಕಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪಿಎಸ್ಐ ರವಿ ಮದನೆ ಮತ್ತು ಹರ್ಷಲ್ ಕಾಳೆ ಎಂದು ಹೇಳಲಾಗಿದೆ. ಈಗ ಇವರನ್ನ ಅಮಾನತ್ತು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...