ಮಧ್ಯಪ್ರದೇಶದ ಉಜ್ಜಿಯಿನಿಯ ಮಹಾಕಾಳೇಶ್ವರ ದೇಗುಲದ ಆವರಣದಲ್ಲಿ ಭಕ್ತರಿಗಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ. ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ ಭಕ್ತರಿಗೆ ಬೇರೆಡೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಹೋದಲ್ಲಿ ದೇಗುಲದ ಆವರಣದಲ್ಲೇ ಲಸಿಕೆಯನ್ನು ಪಡೆಯಬಹುದಾಗಿದೆ. ಈ ಲಸಿಕಾ ಅಭಿಯಾನಕ್ಕೆ ಸೆಪ್ಟೆಂಬರ್ 15ರಿಂದ ಚಾಲನೆ ದೊರಕಿದೆ. ಭಕ್ತಾದಿಗಳು ತಮ್ಮ ಮೊದಲ ಹಾಗೂ 2ನೇ ಡೋಸ್ನ್ನು ಇಲ್ಲಿಯೇ ಪಡೆಯಬಹುದಾಗಿದೆ.
ಕೋವಿಡ್ 19ನಿಂದಾಗಿ ಬರೋಬ್ಬರಿ 17 ತಿಂಗಳುಗಳ ಕಾಲ ಬಂದ್ ಆಗಿದ್ದ ಮಹಾಕಾಳೇಶ್ವರ ದೇಗುಲವು ಸೆಪ್ಟೆಂಬರ್ 11ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಸೆಪ್ಟೆಂಬರ್ 11ರಂದು ನಡೆದು ಭಸ್ಮ ಆರತಿಯಲ್ಲಿ 686 ಭಕ್ತರು ಭಾಗಿಯಾಗಿದ್ದರು. ಇವರೆಲ್ಲ ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸಿಯೇ ಭಸ್ಮ ಆರತಿಯಲ್ಲಿ ಭಾಗಿಯಾಗಿದ್ದರು.
ಉಜ್ಜಯಿನಿಯ ಮಹಾಕೇಶ್ವರ ದೇಗುಲವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಹಾಗೂ ಹಿಂದೂಗಳ ಪ್ರಸಿದ್ಧ ಪುಣ್ಯಕ್ಷೇತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.