alex Certify ʼಸೌರಶಕ್ತಿʼ ಚಾಲಿತ ಸೈಕಲ್​ ಕಂಡು ಹಿಡಿದ ವಿದ್ಯಾರ್ಥಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೌರಶಕ್ತಿʼ ಚಾಲಿತ ಸೈಕಲ್​ ಕಂಡು ಹಿಡಿದ ವಿದ್ಯಾರ್ಥಿ….!

ಮಧುರೈನ ಬಿಎಸ್​ಸಿ ಮೂರನೇ ವರ್ಷದ ವಿದ್ಯಾರ್ಥಿ ಸೋಲಾರ್​​​ ಶಕ್ತಿಯಿಂದ ಚಲಿಸಬಲ್ಲ ಬೈಸಿಕಲ್​​ನ್ನು ಆವಿಷ್ಕಾರ ಮಾಡಿದ್ದಾರೆ. ದಿ ಅಮೆರಿಕನ್​ ಕಾಲೇಜು ವಿದ್ಯಾರ್ಥಿಯಾಗಿರುವ ಎಂ. ಧನುಷ್​ ಕುಮಾರ್​ ಈ ಸಾಧನೆಯನ್ನ ಮಾಡಿದ ವಿದ್ಯಾರ್ಥಿ. ಸೋಲಾರ್​ ಸಹಾಯದಿಂದ ಬ್ಯಾಟರಿ ಚಾರ್ಜ್​ ಆದ ಬಳಿಕ ಈ ಸೈಕಲ್​​ ಪ್ರತಿ ಗಂಟೆಗೆ 30 ಕಿಲೋಮೀಟರ್​ ವೇಗದಲ್ಲಿ ಸಂಚರಿಸುತ್ತದೆ.

ನಾನು ಭೌತಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರೋದ್ರಿಂದ ಹಾಗೂ ಎಲೆಕ್ಟ್ರಿಕ್​ ಮತ್ತು ಸೋಲಾರ್​ ಪವರ್​ ವಾಹನಗಳ ನಮ್ಮ ಭವಿಷ್ಯ ಕೂಡ ಆಗಿರೋದ್ರಿಂದ ನಾನು ಐಡಿಯಾವನ್ನ ಉಪಯೋಗಿಸಿದೆ ಎಂದು ಧನುಷ್​ ಕುಮಾರ್​ ಹೇಳಿದ್ದಾನೆ.

ಸೋಲಾರ್​​ನ ಸಹಾಯದಿಂದ ಬೈಸಿಕಲ್​​ 50 ಕಿಲೋಮೀಟರ್​​ವರೆಗೆ ನಿರಂತರವಾಗಿ ಚಲಿಸಲಿದೆ. ಹಾಗೂ ಪ್ರತಿ ಗಂಟೆಗೆ 30 ಕಿಲೋಮೀಟರ್​ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಸೈಕಲ್​ಗೆ ಇದೆ. ಸೋಲಾರ್​ ಪವರ್​ ಕಡಿಮೆ ಇದ್ದ ಸಂದರ್ಭದಲ್ಲಿ ಪೆಡಲ್​​ನ ಸಹಾಯದಿಂದಲೂ ಸೈಕಲ್​ನ್ನು ಓಡಿಸಬಹುದಾಗಿದೆ.

ಈ ಸೈಕಲ್​​ನ್ನು ತಯಾರು ಮಾಡಲು ಧನುಷ್​ ಸರಿ ಸುಮಾರು 25 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನ ಬಳಕೆ ಮಾಡಿದ್ದಾರೆ. ನಿಜವಾಗಿ ಈ ಸೈಕಲ್​ ತಯಾರು ಮಾಡಲು 18 ಸಾವಿರ ರೂಪಾಯಿ ಸಾಕಾಗುತ್ತದೆ. ಆದರೆ ಕೊರೊನಾ ಕಾರಣದಿಂದಾಗಿ ಕೆಲ ವಸ್ತುಗಳ ಬೆಲೆ ಏರಿಕೆ ಆಗಿರೋದ್ರಿಂದ ಸೈಕಲ್​ ತಯಾರಿಕೆಯ ಮೇಲೂ ಪರಿಣಾಮ ಬೀರಿದೆ ಅಂತಾರೆ ಧನುಷ್​. ವಿದ್ಯಾರ್ಥಿ ಧನುಷ್​​ನ ಸಾಧನೆಗೆ ಕಾಲೇಜು ಪ್ರಾಂಶುಪಾಲರಾದ ಡಾ. ಡಿ.ಎಂ. ದವಮಣಿ ಕ್ರಿಸ್ಟೋಬರ್​​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

— ANI (@ANI) July 10, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...