alex Certify ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆ….! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆ….! ಮುಂದೇನಾಯ್ತು ನೋಡಿ

 

ಚಲಿಸುತ್ತಿರುವ ರೈಲನ್ನು ಹತ್ತಲು ಹೋದ ಮಹಿಳೆ ಆಯತಪ್ಪಿ ಕೆಳಕ್ಕೆ ಬಿದ್ದ ಘಟನೆ ಇಂದೋರ್​ನಲ್ಲಿ ನಡೆದಿದೆ. ಆದರೆ ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲ್ವೆ ಇಲಾಖೆ ಪಿಆರ್​ಓ ಖೇಮ್​ರಾಜ್​​​ ಮೀನಾ ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆಯು ಮಂಗಳವಾರ ನಡೆದಿದೆ.

ಪುರುಷ ಹಾಗೂ ಮಗುವಿನೊಂದಿಗೆ ಇದ್ದ ಮಹಿಳೆಯು ರೈಲನ್ನು ಹತ್ತಲು ಯತ್ನಿಸಿದ್ದರು. ರೈಲಿನ ಒಳಗಡೆ ಲಗೇಜ್​ಗಳನ್ನು ಇರಿಸಿದ ಬಳಿಕ ಪುರುಷ ಹಾಗೂ ಮಗು ಮೊದಲು ರೈಲನ್ನು ಹತ್ತಿದರು. ಆದರೆ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದಿದ್ದಾರೆ ಎಂದು ಮೀನಾ ಹೇಳಿದ್ರು.

ಖುಷಿ ಸುದ್ದಿ….! ಮುಂದಿನ ತಿಂಗಳು ಮಕ್ಕಳಿಗೆ ಬರಲಿದೆ ಕೊರೊನಾ ಲಸಿಕೆ

ಆದರೆ ಕೂಡಲೇ ಅಲರ್ಟ್ ಆದ ಸಹ ಪ್ರಯಾಣಿಕರು ಬೇಗನೇ ಚೈನ್​​ ಎಳೆಯುವ ಮೂಲಕ ರೈಲು ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೀನಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...