ಚಲಿಸುತ್ತಿರುವ ರೈಲನ್ನು ಹತ್ತಲು ಹೋದ ಮಹಿಳೆ ಆಯತಪ್ಪಿ ಕೆಳಕ್ಕೆ ಬಿದ್ದ ಘಟನೆ ಇಂದೋರ್ನಲ್ಲಿ ನಡೆದಿದೆ. ಆದರೆ ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲ್ವೆ ಇಲಾಖೆ ಪಿಆರ್ಓ ಖೇಮ್ರಾಜ್ ಮೀನಾ ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆಯು ಮಂಗಳವಾರ ನಡೆದಿದೆ.
ಪುರುಷ ಹಾಗೂ ಮಗುವಿನೊಂದಿಗೆ ಇದ್ದ ಮಹಿಳೆಯು ರೈಲನ್ನು ಹತ್ತಲು ಯತ್ನಿಸಿದ್ದರು. ರೈಲಿನ ಒಳಗಡೆ ಲಗೇಜ್ಗಳನ್ನು ಇರಿಸಿದ ಬಳಿಕ ಪುರುಷ ಹಾಗೂ ಮಗು ಮೊದಲು ರೈಲನ್ನು ಹತ್ತಿದರು. ಆದರೆ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದಿದ್ದಾರೆ ಎಂದು ಮೀನಾ ಹೇಳಿದ್ರು.
ಖುಷಿ ಸುದ್ದಿ….! ಮುಂದಿನ ತಿಂಗಳು ಮಕ್ಕಳಿಗೆ ಬರಲಿದೆ ಕೊರೊನಾ ಲಸಿಕೆ
ಆದರೆ ಕೂಡಲೇ ಅಲರ್ಟ್ ಆದ ಸಹ ಪ್ರಯಾಣಿಕರು ಬೇಗನೇ ಚೈನ್ ಎಳೆಯುವ ಮೂಲಕ ರೈಲು ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೀನಾ ಹೇಳಿದ್ರು.