alex Certify ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….!

19 ವರ್ಷದ ವಿವಾಹಿತೆಯನ್ನ ಸಾರ್ವಜನಿಕರ ಎದುರಲ್ಲೇ ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿದೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈಕೆ ಪತಿಯ ಮನೆಯನ್ನ ತ್ಯಜಿಸಿ ಬಂದಿದ್ದಳು ಎನ್ನಲಾಗಿದೆ.

ಹಲ್ಲೆಕೋರರೇ ಈ ವಿಡಿಯೋವನ್ನ ರೆಕಾರ್ಡ್​ ಮಾಡಿದ್ದು ಇದರಲ್ಲಿ ಓರ್ವ, ಅಳೋದನ್ನ ನಿಲ್ಲಿಸು, ಇನ್ಮುಂದೆ ಹೀಗೆ ವಾಪಸ್​ ಬರ್ತೀಯಾ..? ಎಂದು ಕೇಳುತ್ತಿದ್ದರೆ ಇನ್ನೊಬ್ಬ ವ್ಯಕ್ತಿಯು ಆಕೆಗೆ ಕೋಲಿನಿಂದ ನಿರಂತರವಾಗಿ ಬಾರಿಸಿದ್ದಾನೆ.

ಇನ್ನೊಂದು ವಿಡಿಯೋದಲ್ಲಿ ಮಹಿಳೆಯನ್ನ ಮರಕ್ಕೆ ಕಟ್ಟಿದ ಬಳಿಕ ಆಕೆ ದುಸ್ಥಿತಿಯನ್ನ ಕಂಡು ಹಲ್ಲೆಕೋರರು ನಕ್ಕಿದ್ದಾರೆ. ಈಕೆ ಇಷ್ಟೊಂದು ಕಷ್ಟ ಅನುಭವಿಸಿದ್ರೂ ಸಹ ಯಾರೊಬ್ಬರೂ ಆಕೆಯ ಸಹಾಯಕ್ಕೆ ಧಾವಿಸಿಲ್ಲ.

ಜೂನ್ 28ರಂದು ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರಕರಣ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ನೀಡಿದ ಹೇಳಿಕೆ ಆಧರಿಸಿ ಆಕೆಯ ತಂದೆ ಹಾಗೂ ಸೋದರ ಸಂಬಂಧಿಗಳನ್ನ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...