alex Certify ಆಸ್ಪತ್ರೆಯಲ್ಲೇ ಅತ್ಯಾಚಾರ: ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ವಾರ್ಡ್ ಬಾಯ್ ಲೈಂಗಿಕ ದೌರ್ಜನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲೇ ಅತ್ಯಾಚಾರ: ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ವಾರ್ಡ್ ಬಾಯ್ ಲೈಂಗಿಕ ದೌರ್ಜನ್ಯ

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 50 ವರ್ಷದ ಮಹಿಳಾ ರೋಗಿ ಮೇಲೆ ವಾರ್ಡ್ ಬಾಯ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಜುಲೈ 28 ರಂದು ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ(MYH) ಈ ಘಟನೆ ನಡೆದಿದ್ದು, ಸೋಮವಾರ ರಾತ್ರಿ 32 ವರ್ಷದ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಪ್ರಭಾರಿ ರಾಜೀವ್ ತ್ರಿಪಾಠಿ ತಿಳಿಸಿದ್ದಾರೆ. ಕೇಸ್ ದಾಖಲಾದ ನಂತರ ಆರೋಪಿ ಪರಾರಿಯಾಗಿದ್ದಾನೆ.

ನೆರೆಯ ಧಾರ್ ಜಿಲ್ಲೆಯ ನಿವಾಸಿಯಾದ ಮಹಿಳೆ ಜುಲೈ 28 ರಂದು ಡಯಾಲಿಸಿಸ್‌ಗಾಗಿ ಎಂವೈಎಚ್‌ಗೆ ಬಂದಿದ್ದಾಗ ವಾರ್ಡ್ ಬಾಯ್ ಆಕೆಯನ್ನು ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆಕೆ ವಿರೋಧಿಸಿದಾಗ, ಆರೋಪಿಯು ಸಾಮಾಜಿಕ ಕಳಂಕದ ಭಯ ಹುಟ್ಟಿಸಿ ಬೆದರಿಸಿದ್ದಾನೆ. ಮಹಿಳೆ ಪೋಲಿಸರನ್ನು ಸಂಪರ್ಕಿಸದಂತೆ ತಡೆಯಲು ಎರಡು ದಿನಗಳ ಕಾಲ ಆಸ್ಪತ್ರೆಯ ಖಾಸಗಿ ವಾರ್ಡ್‌ಗೆ ದಾಖಲಿಸಿದ್ದಾನೆ.

ನಂತರ, ವಾರ್ಡ್ ಬಾಯ್ ಮಹಿಳೆಗೆ 1,000 ರೂ. ನೀಡಿ ಆಕೆಯನ್ನು ವಾಪಸ್ ಮನೆಗೆ ಕಳುಹಿಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎರಡು ದಿನಗಳ ನಂತರ, ಮಹಿಳೆ ಮಾಧ್ಯಮದವರಿಗೆ ಘಟನೆಯ ಬಗ್ಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾಳೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...