alex Certify ಮೊಬೈಲ್​ ನೆಟ್​ವರ್ಕ್​ ಸಿಗದ್ದಕ್ಕೆ ತೊಟ್ಟಿಲು ಏರಿ ಕುಳಿತ ಸಚಿವ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ ನೆಟ್​ವರ್ಕ್​ ಸಿಗದ್ದಕ್ಕೆ ತೊಟ್ಟಿಲು ಏರಿ ಕುಳಿತ ಸಚಿವ…!

ಮೊಬೈಲ್​ ನೆಟ್​ವರ್ಕ್​ ಸರಿಯಾಗಿ ಸಿಗ್ತಿಲ್ಲ ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಸಚಿವರೊಬ್ಬರು ಜಾತ್ರೆ ತೊಟ್ಟಿಲಿ​​ನಲ್ಲಿ 5 ಅಡಿ ಎತ್ತರಕ್ಕೆ ಏರಿದ್ದಾರೆ. ಅಶೋಕ್​ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮಧ್ಯ ಪ್ರದೇಶ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್​​ ರಾಜ್ಯ ಸಚಿವ ಬ್ರಜೇಂದ್ರ ಸಿಂಗ್​ ಯಾದವ್​​ ಅಮ್ಖೋ ಗ್ರಾಮದಲ್ಲಿ ಮೊಬೈಲ್​ ನೆಟ್​ವರ್ಕ್​ ಸರಿಯಾಗಿ ಸಿಗದ ಕಾರಣ ಸ್ವಿಂಗ್​ ಏರಿ ಕೆಲ ಫೋನ್​ ಕಾಲ್​ನ್ನು ಮಾಡಿದ್ದಾರೆ.

ಸ್ವಿಂಗ್​​ನಲ್ಲಿ ಕೂತು ಸಚಿವರು ಫೋನ್​ ಕಾಲ್​ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಲ್ಲದೇ ಈ ಫೋಟೋ ಹಾಗೂ ವಿಡಿಯೋಗಳನ್ನ ಸಖತ್​ ಟ್ರೋಲ್​ ಮಾಡಲಾಗ್ತಿದೆ.

ಅಮ್ಖೋ ಗ್ರಾಮದಲ್ಲಿ ನಡೆದ ಭಗವದ್ಗೀತೆ ಪಠಣ ಕಾರ್ಯಕ್ರಮದ ಮಧ್ಯೆ 50 ಅಡಿಯ ಜಾತ್ರಾ ತೊಟ್ಟಿಲೊಂದನ್ನ ಇಡಲಾಗಿತ್ತು. ಇದೇ ತೊಟ್ಟಿಲನ್ನ ಏರಿ ಸಚಿವರು ಫೋನ್​ ಕಾಲ್​ ಮಾಡಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅವ್ರು, ಸ್ಥಳೀಯ ನಿವಾಸಿಗಳು ಅವರ ಸಮಸ್ಯೆಯನ್ನ ಹೇಳಿಕೊಳ್ಳೋಕೆ ನನಗೆ ಕರೆ ಮಾಡುತ್ತಿದ್ದರು. ಆದರೆ ನೆಟ್​ವರ್ಕ್ ಸಮಸ್ಯೆಯಿಂದಾಗಿ ನನಗೆ ಮಾತನಾಡಲು ಆಗ್ತಿರಲಿಲ್ಲ. ಹೀಗಾಗಿ ಈ ನಿರ್ಧಾರ ಮಾಡಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...