ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗ್ತಿಲ್ಲ ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಸಚಿವರೊಬ್ಬರು ಜಾತ್ರೆ ತೊಟ್ಟಿಲಿನಲ್ಲಿ 5 ಅಡಿ ಎತ್ತರಕ್ಕೆ ಏರಿದ್ದಾರೆ. ಅಶೋಕ್ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಧ್ಯ ಪ್ರದೇಶ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ರಾಜ್ಯ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅಮ್ಖೋ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗದ ಕಾರಣ ಸ್ವಿಂಗ್ ಏರಿ ಕೆಲ ಫೋನ್ ಕಾಲ್ನ್ನು ಮಾಡಿದ್ದಾರೆ.
ಸ್ವಿಂಗ್ನಲ್ಲಿ ಕೂತು ಸಚಿವರು ಫೋನ್ ಕಾಲ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ಈ ಫೋಟೋ ಹಾಗೂ ವಿಡಿಯೋಗಳನ್ನ ಸಖತ್ ಟ್ರೋಲ್ ಮಾಡಲಾಗ್ತಿದೆ.
ಅಮ್ಖೋ ಗ್ರಾಮದಲ್ಲಿ ನಡೆದ ಭಗವದ್ಗೀತೆ ಪಠಣ ಕಾರ್ಯಕ್ರಮದ ಮಧ್ಯೆ 50 ಅಡಿಯ ಜಾತ್ರಾ ತೊಟ್ಟಿಲೊಂದನ್ನ ಇಡಲಾಗಿತ್ತು. ಇದೇ ತೊಟ್ಟಿಲನ್ನ ಏರಿ ಸಚಿವರು ಫೋನ್ ಕಾಲ್ ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅವ್ರು, ಸ್ಥಳೀಯ ನಿವಾಸಿಗಳು ಅವರ ಸಮಸ್ಯೆಯನ್ನ ಹೇಳಿಕೊಳ್ಳೋಕೆ ನನಗೆ ಕರೆ ಮಾಡುತ್ತಿದ್ದರು. ಆದರೆ ನೆಟ್ವರ್ಕ್ ಸಮಸ್ಯೆಯಿಂದಾಗಿ ನನಗೆ ಮಾತನಾಡಲು ಆಗ್ತಿರಲಿಲ್ಲ. ಹೀಗಾಗಿ ಈ ನಿರ್ಧಾರ ಮಾಡಿದೆ ಎಂದು ಹೇಳಿದ್ರು.