ಮಧ್ಯ ಪ್ರದೇಶದ ಕುಟುಂಬವೊಂದು ಬರೋಬ್ಬರಿ 2.5 ಲಕ್ಷ ರೂಪಾಯಿಯ ಎಲೆಕ್ಟ್ರಿಸಿಟಿ ಬಿಲ್ ಪಡೆದಿದ್ದು ಇದನ್ನ ನೋಡಿದ ಮನೆಯವರು ಶಾಕ್ ಆಗಿದ್ದಾರೆ. ಗುನಾ ಜಿಲ್ಲೆಯ ಶಾಂತಿ ಎಂಬಲ್ಲಿ 65 ವರ್ಷದ ರಮಾಬಾಯಿ ಪ್ರಜಾಪತಿ ಎಂಬವರು ಕಳೆದ ತಿಂಗಳು ಇಷ್ಟು ದೊಡ್ಡ ಮೊತ್ತದ ಕರೆಂಟ್ ಬಿಲ್ ಪಡೆದಿದ್ದಾರೆ.
ತಮ್ಮ ಕರೆಂಟ್ ಬಿಲ್ನ್ನು ಸರಿ ಮಾಡಿಕೊಳ್ಳಲು ರಮಾಬಾಯಿ ಕಳೆದ 7 ದಿನಗಳಿಂದ ಕಚೇರಿಗೆ ತಿರುಗಾಡುತ್ತಲೇ ಇದ್ದಾರೆ. ಆದರೆ ಕಚೇರಿಯಿಂದ ಮಾತ್ರ ಯಾವುದೇ ಸಹಾಯ ಸಿಕ್ಕಿಲ್ಲ.
ರಮಾಬಾಯಿ ತಮ್ಮ ಗುಡಿಸಲಿನಲ್ಲಿ ಒಂದು ಬಲ್ಬ್ ಹಾಗೂ ಫ್ಯಾನ್ನ್ನು ಹೊಂದಿದ್ದಾರೆ. ಇವರಿಗೆ ಪ್ರತಿ ತಿಂಗಳು 300 ರಿಂದ 500 ರೂಪಾಯಿ ಬಿಲ್ ಆಗುತ್ತಿತ್ತು. ಲಾಕ್ಡೌನ್ನಿಂದಾಗಿ ಈಕೆಗೆ ಕಳೆದ 2 ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟೋದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ 2.5 ಲಕ್ಷ ರೂಪಾಯಿ ಬಿಲ್ ಕಂಡು ಶಾಕ್ ಆಗಿದ್ದಾರೆ.
ಪರವಾನಿಗಿ ಇಲ್ಲದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್
ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಾ ನಾನು ಜೀವನ ಸಾಗಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಒಂದು ಬಲ್ಬ್ ಹಾಗೂ ಟೇಬಲ್ ಫ್ಯಾನ್ ಇದೆ. ಆದರೆ ನನಗೆ 2.5 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಇಷ್ಟೊಂದು ಬಿಲ್ ಬರೋಕೆ ಸಾಧ್ಯವೇ ಇಲ್ಲ. ನಾನು ಕಳೆದ 7 ದಿನಗಳಿಂದ ಎಲೆಕ್ಟ್ರಿಸಿಟಿ ಕಚೇರಿಗೆ ಅಲೆಯುತ್ತಲೇ ಇದ್ದೇನೆ. ಆದರೆ ನನ್ನ ಕಷ್ಟವನ್ನ ಯಾರೂ ಕೇಳ್ತಿಲ್ಲ ಎಂದು ಅಳಲನ್ನ ತೋಡಿಕೊಂಡ್ರು.