ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟನೆ ಹಾಗೂ ಡಾನ್ಸ್ ವಿಷ್ಯದಲ್ಲಿ ಮಾತ್ರ ಅಭಿಮಾನಿಗಳ ಮನಸ್ಸು ಕದ್ದಿಲ್ಲ. ಮಾಧುರಿ ದೀಕ್ಷಿತ್ ಫಿಟ್ನೆಸ್ ವಿಷ್ಯದಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ.
50 ವರ್ಷದ ಮೇಲಾಗಿದ್ದರೂ ಮಾಧುರಿ ಸೌಂದರ್ಯ ಯುವಕರನ್ನು ಸೆಳೆಯುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯದ ಬಗ್ಗೆ ಟಿಪ್ಸ್ ನೀಡುವ ಮಾಧುರಿ, ಉತ್ತಮ ಜೀವನ ಶೈಲಿ ಆರೋಗ್ಯದ ಜೊತೆ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಸಹಕಾರಿ ಎಂದಿದ್ದಾರೆ.
ಆರೋಗ್ಯವಾಗಿರಲು ಹೆಚ್ಚೆಚ್ಚು ನೀರು ಕುಡಿಯುವಂತೆ ಮಾಧುರಿ ಸಲಹೆ ನೀಡುತ್ತಾರೆ. ದೇಹದಲ್ಲಿರುವ ಕೆಟ್ಟ ಜೀವಾಣುಗಳನ್ನು ಹೊರ ಹಾಕಲು ನೀರು ನೆರವಾಗುತ್ತದೆ ಎಂದ ಮಾಧುರಿ, ಕೂದಲಿನ ಸೌಂದರ್ಯ ವೃದ್ಧಿಗೆ ಟಿಪ್ಸ್ ನೀಡಿದ್ದಾರೆ.
ಹೇರ್ ಡ್ರೈಯರ್ ಅತಿಯಾದ ಬಳಕೆಯಿಂದ ಕೂದಲು ಹಾಳಾಗುತ್ತದೆ ಎಂದು ಮಾಧುರಿ ಹೇಳಿದ್ದಾರೆ.
ಸಾಮಾನ್ಯ ಟವೆಲ್ ಕೂದಲಿಗೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಮೈಕ್ರೋಫೈಬರ್ ಬಟ್ಟೆಯ ಬಳಕೆ ಹೆಚ್ಚು ಉತ್ತಮ ಎಂದಿದ್ದಾರೆ.
ಬಿಸಿ ನೀರಿನಲ್ಲಿ ತಲೆ ಸ್ವಚ್ಛಗೊಳಿಸಿದಾಗ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ. ಉಗುರು ಬೆಚ್ಚಿನ ನೀರು ಇದಕ್ಕೆ ಒಳ್ಳೆಯದು.
ಕೂದಲನ್ನು ಗಟ್ಟಿಯಾಗಿ ಬಾಚಿಕೊಳ್ಳಬಾರದು. ಮೃದುವಾಗಿ ಕೂದಲನ್ನು ಬಾಚಬೇಕು.
ತಂಪಾದ ಸ್ಥಳದಲ್ಲಿ ವಾಸಿಸುವವರು ತಲೆಗೆ ಸ್ಕಾರ್ಪ್ ಅಥವಾ ಕ್ಯಾಪ್ ಹಾಕಿಕೊಳ್ಳಬೇಕು.
ಕೂದಲಿಗೆ ನಿಯಮಿತವಾಗಿ ಎಣ್ಣೆ ಹಾಕಿ ಮಸಾಜ್ ಮಾಡಬೇಕೆಂದು ಮಾಧುರಿ ಹೇಳಿದ್ದಾರೆ. ಇದಲ್ಲದೆ ಕೂದಲಿಗೆ ಆರೋಗ್ಯಕರ ಎಣ್ಣೆ ತಯಾರಿಸುವ ವಿಧವನ್ನು ಮಾಧುರಿ ಹೇಳಿದ್ದಾರೆ.
½ ಕಪ್ ತೆಂಗಿನ ಎಣ್ಣೆ,15-20 ಕರಿಬೇವು ಮತ್ತು 1 ಚಮಚ ಮೆಂತ್ಯೆ ಬೀಜ ಹಾಗೂ ಸಣ್ಣ ಈರುಳ್ಳಿ ಬೇಕು. ಈ ಎಲ್ಲ ಪದಾರ್ಥವನ್ನು ಒಟ್ಟಿಗೆ ಕುದಿಸಿ ತಣ್ಣಗಾಗಲು ಬಿಡಿ. ನಂತ್ರ ಇದನ್ನು ತಲೆಗೆ ಹಚ್ಚಿಕೊಳ್ಳಬೇಕೆಂದು ಮಾಧುರಿ ಹೇಳಿದ್ದಾರೆ.