ಕಲಬುರ್ಗಿ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿರುವ ಬಿಜೆಪಿ ಶಾಸಕ ಬಸನಗೌದ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಯತ್ನಾಳ್ ಗೆ ಮಾಡಲು ಕೆಲಸವಿಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಭವಿಷ್ಯ ಹೇಳಲಿ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಜನರನ್ನು ಹುಚ್ಚರನ್ನಾಗಿಸುತ್ತಿದೆ ಎಂಬ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ತಿರುಗೇಟು ನೀಡಿರುವ ಸಚಿವರು, ಅನಂತ ಕುಮಾರ್ ಹೆಗಡೆಯೇ ದೊಡ್ಡ ಹುಚ್ಚ. ಆತ ಎಲೆಕ್ಷನ್ ಬರುವವರೆಗೂ ಮಲ್ಕೊಂಡಿರ್ತಾನೆ. ಎಲೆಕ್ಷನ್ ಬಂದ ಬಳಿಕ ಎದ್ದು ಬರ್ತಾನೆ. ಈ ಬಾರಿ ಆತನನ್ನು ರಾಜಕೀಯವಾಗಿ ಪರ್ಮನೆಂಟ್ ಆಗಿ ಮಲಗಿಸುತ್ತೇವೆ ಎಂದು ಕಿಡಿಕಾರಿದ್ದಾರೆ.