alex Certify ಟೋಕಿಯೋ ಒಲಿಂಪಿಕ್ಸ್ ನಲ್ಲಿ ʼಮೇಕ್ ಇನ್ ಇಂಡಿಯಾʼ ಕಲರವ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್ ನಲ್ಲಿ ʼಮೇಕ್ ಇನ್ ಇಂಡಿಯಾʼ ಕಲರವ…!

ಟೋಕಿಯೋ ಒಲಿಂಪಿಕ್ಸ್ 2020 ಕ್ರೀಡಾಕೂಟ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಜುಲೈ 23ರಿಂದ ಜಪಾನ್ ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಈ ನಡುವೆ ಜಪಾನ್ ನಲ್ಲೀಗ ಪ್ರಧಾನಿ ಮೋದಿ ಕನಸಿನ ಕೂಸಾದ ಮೇಕ್ ಇನ್ ಇಂಡಿಯಾದ ಕಲರವ ಎಲ್ಲೆಡೆ ಕಂಡು ಬರುತ್ತಿದೆ.

ಹೌದು, ಟೋಕಿಯೋ ಒಲಿಂಪಿಕ್ಸ್ ಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಕ್ರೀಡಾಂಗಣದಲ್ಲಿ ಎತ್ತ ನೋಡಿದರೂ ನಮ್ಮ ದೇಶಿಯ ಉತ್ಪನ್ನ/ಉಪಕರಣಗಳೇ ಗೋಚರಿಸುತ್ತಿದೆ. ಶಾಟ್ ಪುಟ್, ಡಿಸ್ಕಸ್ ಮತ್ತು ಹ್ಯಾಮರ್ ಥ್ರೋ ಮುಂತಾದ ಪಂದ್ಯಗಳಿಗೆ ಉಪಕರಣಗಳನ್ನು ಒದಗಿಸಲು ಕ್ರೀಡಾ ಆಡಳಿತ ಮಂಡಳಿ ಪಟ್ಟಿ ಮಾಡಿದ ಆರು ಕಂಪನಿಗಳಲ್ಲಿ ಭಾರತ ಮೂಲದ ಆನಂದ್ ಟ್ರ್ಯಾಕ್ ಮತ್ತು ಫೀಲ್ಡ್ ಇಕ್ಯುಪ್ ಮೆಂಟ್(ಎಟಿಇ), ಭಲ್ಲಾ ಇಂಟರ್ ನ್ಯಾಷನಲ್ ಮತ್ತು ನೆಲ್ಕೊಗಳನ್ನು ಕೂಡ ಆಯ್ಕೆ ಮಾಡಲಾಗಿದೆ.

ಜುಲೈ 23ರಂದು ಆರಂಭವಾಗಲಿರುವ ಒಲಿಂಪಿಕ್ಸ್ ಗೆ ಈ ಕಂಪನಿಗಳು 7.26 ಕೆ.ಜಿ ಶಾಟ್ ಪುಟ್, 2 ಕೆ.ಜಿ.ಯಷ್ಟು ಡಿಸ್ಕಸ್ ಥ್ರೋ, ಮತ್ತು 7.26 ಕೆ.ಜಿ. ಹಾಮ್ಮರ್ ಒದಗಿಸಲಿವೆ. ಈ ಎಲ್ಲ ಸಾಧನಗಳನ್ನು ಆಯ್ಕೆ ಮಾಡಲು ಆಟಗಾರರು ಭಾಗವಹಿಸುವ ಸ್ಪರ್ಧೆಯ ಸ್ಥಳದಲ್ಲೇ ಇರಿಸಲಾಗುತ್ತದೆ.

ಈ ಸಂಬಂಧ ಮಾತನಾಡಿರುವ ಎಟಿಇ ಸಂಸ್ಥೆ, ‘’ನಾವು ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಹ್ಯಾಮರ್ ಥ್ರೋಗಳಲ್ಲಿ ಆರು ಉಪಕರಣಗಳನ್ನು ಒದಗಿಸುತ್ತಿದ್ದೇವೆ. ಟೋಕಿಯೋ ಒಲಿಂಪಿಕ್ಸ್ ನ ಪುರುಷರು ಹಾಗೂ ಮಹಿಳೆಯರ ಪಂದ್ಯಗಳಿಗಾಗಿ 36 ಉಪಕರಣಗಳನ್ನು ಒದಗಿಸುತ್ತಿದ್ದೇವೆ. 1992ರ ಬಾರ್ಸಿಲೋನಾ ಕ್ರೀಡಾಕೂಟದಿಂದ ಇಲ್ಲಿಯವರೆಗೆ ನಮ್ಮ ಉಪಕರಣಗಳು ಒಲಿಂಪಿಕ್ಸ್ ನಲ್ಲಿ ಬಳಕೆಯಲ್ಲಿವೆ. ವಾಸ್ತವವಾಗಿ 1991ರ ವಿಶ್ವ ಚಾಂಪಿಯನ್ ನಿಂದ ಇಲ್ಲಿಯವರೆಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು’’ ಎಂದು ಹೇಳಿದೆ.

ಭಲ್ಲಾ ಇಂಟರ್ ನ್ಯಾಷನಲ್ ಸಹ 36 ಉಪಕರಣಗಳನ್ನು ಒದಗಿಸುತ್ತಿದೆ. ‘’2016ರ ರಿಯೋ ಒಲಿಂಪಿಕ್ಸ್ ನಲ್ಲಿ ನಮ್ಮ ಉತ್ಪನ್ನವು ಉತ್ತಮ ಗುಣಮಟ್ಟದ ಉತ್ಪನ್ನಗಳಿಗಾಗಿ ಪ್ರಶಸ್ತಿ ಬಾಚಿದೆ. ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದು ನಮ್ಮ ಕಂಪನಿಗೆ ಮತ್ತು ದೇಶಕ್ಕೆ ಹೆಮ್ಮೆಯ ವಿಚಾರ’’ ಎಂದು ಕಂಪನಿಯ ಪ್ರತಿನಿಧಿ ಅಶುತೋಷ್ ಭಲ್ಲಾ ಹೇಳಿದ್ದಾರೆ.

‘’ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವವರಲ್ಲಿ ಮೂವರು ಭಾರತೀಯರು ದೇಶಿಯ ಸಾಧನಗಳನ್ನೇ ಬಳಸಲಿದ್ದಾರೆ. ತಾಜಿಂದರ್ ಸಿಂಗ್ ಹಾಗೂ ಕಮಲ್ ಪ್ರೀತ್ ಕೌರ್ ನಮ್ಮ ಶಾಟ್ ಪುಟ್ ಹಾಗೂ ಡಿಸ್ಕಸ್ ನ್ನು ಬಳಸುತ್ತಾರೆ. ಹಾಗೆಯೇ ಇತರೆ ದೇಶದ ಸ್ಪರ್ಧಿಗಳೂ ಕೂಡ ನಮ್ಮ ಸಾಧನಗಳನ್ನು ಬಳಸುತ್ತಾರೆ ಎನ್ನುವ ನಿರೀಕ್ಷೆಯಿದೆ’’ ಎಂದು ಎಟಿಇ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...