ಭಾರತದಲ್ಲಿ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಆದ್ರೆ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗ್ತಿಲ್ಲ. ನೆರೆ ದೇಶಗಳಲ್ಲೂ ಬೆಲೆಗಳು ಗಗನಕ್ಕೇರುತ್ತಿವೆ. ಶ್ರೀಲಂಕಾದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ.
ಶ್ರೀಲಂಕಾದಲ್ಲಿ ಎಲ್ಪಿಜಿ ಬೆಲೆಗಳು ಸುಮಾರು ಶೇಡಕಾ 90ರಷ್ಟು ಹೆಚ್ಚಾಗಿದೆ. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಭಾರತದಲ್ಲಿ 1000 ರೂಪಾಯಿಗಿಂತ ಕಡಿಮೆಗೆ ಸಿಗ್ತಿದೆ. ಆದ್ರೆ ಶ್ರೀಲಂಕಾದಲ್ಲಿ ಇದರ ಬೆಲೆ 2,657 ರೂಪಾಯಿಯಾಗಿದೆ.
ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ
12.5 ಕೆಜಿ ಸ್ಟ್ಯಾಂಡರ್ಡ್ ಡೊಮೆಸ್ಟಿಕ್ ಎಲ್ಪಿಜಿ ಸಿಲಿಂಡರ್ ಕಳೆದ ಶುಕ್ರವಾರ ಶ್ರೀಲಂಕಾದಲ್ಲಿ 1400 ರೂಪಾಯಿಯಿತ್ತು. ಈಗ ಇದು 1,257 ರೂಪಾಯಿಗಳಿಂದ 2,657 ರೂಪಾಯಿಗೆ ಏರಿಕೆಯಾಗಿದೆ. ಶ್ರೀಲಂಕಾದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಮಾತ್ರವಲ್ಲ ಹಾಲಿನ ಬೆಲೆಯೂ ದುಬಾರಿಯಾಗಿದೆ.
ಒಂದು ಕೆಜಿ ಹಾಲು ಈಗ 250 ರೂಪಾಯಿ ಬದಲು 1,195 ರೂಪಾಯಿಯಾಗಿದೆ. ಗೋಧಿ ಹಿಟ್ಟು, ಸಕ್ಕರೆ ಮತ್ತು ಸಿಮೆಂಟ್‌ನಂತಹ ಇತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಬಂಪರ್ ಏರಿಕೆ ಕಂಡುಬಂದಿದೆ. ಎಲ್‌ಪಿಜಿ ಬೆಲೆ ಏರಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೆಲೆ ಇಳಿಕೆ ಮಾಡುವಂತೆ ಜನರು ಆಗ್ರಹಿಸುತ್ತಿದ್ದಾರೆ.