alex Certify ಜನ ಸಾಮಾನ್ಯರಿಗೆ ಮತ್ತೊಂದು ಬಿಗ್‌ ಶಾಕ್:‌ ತಿಂಗಳ ಅವಧಿಯಲ್ಲೇ ಮೂರನೇ ಬಾರಿಗೆ ಸಿಲಿಂಡರ್‌ ಬೆಲೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ ಸಾಮಾನ್ಯರಿಗೆ ಮತ್ತೊಂದು ಬಿಗ್‌ ಶಾಕ್:‌ ತಿಂಗಳ ಅವಧಿಯಲ್ಲೇ ಮೂರನೇ ಬಾರಿಗೆ ಸಿಲಿಂಡರ್‌ ಬೆಲೆ ಏರಿಕೆ

ಆರ್ಥಿಕ ಸಂಕಷ್ಟದಿಂದ ಈಗಾಗಲೇ ತತ್ತರಿಸುತ್ತಿರುವ ಜನ ಸಾಮಾನ್ಯರಿಗೆ ಇಂದು ಮತ್ತೊಂದು ಶಾಕ್‌ ಸಿಕ್ಕಿದೆ. ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನತೆಗೆ ಇಂದು ಸಿಲಿಂಡರ್‌ ಬೆಲೆಯ ಹೆಚ್ಚಿಳದ ಶಾಕ್‌ ಸಿಕ್ಕಿದೆ. ಮಹತ್ವದ ಸಂಗತಿಯೆಂದರೇ ಫೆಬ್ರವರಿ ತಿಂಗಳೊಂದರಲ್ಲೇ ಮೂರನೇ ಬಾರಿಗೆ ಗೃಹ ಬಳಕೆ ಸಿಲಿಂಡರ್‌ ದರ ಏರಿಕೆಯಾಗಿದೆ.

14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್‌ ದರ ಇಂದು 25 ರೂಪಾಯಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಸಿಲಿಂಡರ್‌ ದರ ಈಗ 794 ರೂಪಾಯಿ ತಲುಪಿದೆ. ಬುಧವಾರವಷ್ಟೇ 769 ರೂ. ಗಳಿದ್ದ ಸಿಲಿಂಡರ್‌ ದರ ಈ ಏರಿಕೆಯಿಂದಾಗಿ 794 ರೂಪಾಯಿಗಳಾಗಿದೆ.

ಈ ಹಿಂದೆ ಅಂದರೆ ಫೆಬ್ರವರಿ 4 ರಂದು ಗೃಹ ಬಳಕೆ ಸಿಲಿಂಡರ್‌ ದರವನ್ನು 25 ರೂಪಾಯಿ ಏರಿಕೆ ಮಾಡಲಾಗಿತ್ತು. ಆ ಬಳಿಕ ಫೆಬ್ರವರಿ 15 ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು.ಇದೀಗ ಮತ್ತೆ 25 ರೂಪಾಯಿ ಏರಿಕೆ ಮಾಡಲಾಗಿದ್ದು, ಫೆಬ್ರವರಿ ತಿಂಗಳೊಂದರಲ್ಲೇ ಸಿಲಿಂಡರ್‌ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾದಂತಾಗಿದೆ.

ಕೋಲ್ಕತ್ತಾದಲ್ಲಿ ಈಗ ಸಿಲಿಂಡರ್‌ ಬೆಲೆ 820 ರೂಪಾಯಿಗಳಾಗಿದ್ದರೆ (795 ನಿನ್ನೆ ದಿನದ ದರ), ಮುಂಬೈನಲ್ಲಿ 794 ರೂ. (769 ರೂ.), ಚೆನ್ನೈ 810 ರೂ. (785 ರೂ.) ಹಾಗೂ ಹೈದರಾಬಾದ್‌ ನಲ್ಲಿ 846 ರೂ. (821 ರೂ.) ಗಳಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...