alex Certify ಪ್ರೀತಿಸಿದ ಯುವತಿಗೆ ಪ್ರೇಮಿಯಿಂದಲೇ ಚಾಕು ಇರಿತ; ಯುವತಿ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದ ಯುವತಿಗೆ ಪ್ರೇಮಿಯಿಂದಲೇ ಚಾಕು ಇರಿತ; ಯುವತಿ ಸ್ಥಿತಿ ಗಂಭೀರ

ಹಾವೇರಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿಗೆ ಚಾಕು ಇರಿದಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

20 ವರ್ಷದ ಯುವತಿ ಲಕ್ಷ್ಮಿ ಚಾಕು ಇರಿತಕ್ಕೆ ಒಳಗಾದವಳು. ಮಹೇಶ್ ಯುವತಿಗೆ ಚಾಕು ಇರಿದ ಆರೋಪಿ. ಎರಡು ವರ್ಷಗಳಿಂದ ಮಹೇಶ್ ಹಾಗೂ ಲಕ್ಷ್ಮೀ ಪ್ರೀತಿಸುತ್ತಿದ್ದರು, ಲಕ್ಷ್ಮಿ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಲಕ್ಷ್ಮಿ ಬೇರೆ ಯುವಕನ ಜೊತೆ ಸ್ನೇಹ ಬೆಳೆಸಿದ್ದಾಳೆ ಎಂಬ ಅನುಮಾನದಿಂದ ಮಹೇಶ್ ಆಕೆಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯ ಕೈ, ಎದೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...