alex Certify ಮಿದುಳಿನ ಶಸ್ತ್ರ ಚಿಕಿತ್ಸೆಯ ಹೊಲಿಗೆಗಳಿಂದ ಮಗಳು ಅಸಹ್ಯ ಪಡಬಾರದೆಂದು ತನ್ನ ತಲೆಯನ್ನೇ ಬೋಳಿಸಿಕೊಂಡ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿದುಳಿನ ಶಸ್ತ್ರ ಚಿಕಿತ್ಸೆಯ ಹೊಲಿಗೆಗಳಿಂದ ಮಗಳು ಅಸಹ್ಯ ಪಡಬಾರದೆಂದು ತನ್ನ ತಲೆಯನ್ನೇ ಬೋಳಿಸಿಕೊಂಡ ತಂದೆ

ಪೋಷಕರು ಹಾಗೂ ಮಕ್ಕಳ ನಡುವಿನ ಪ್ರೀತಿಯ ಬಾಂಧವ್ಯ ವಿಶ್ವದಲ್ಲೇ ಅತಿ ದೊಡ್ಡದು. ಯಾವ ಮಟ್ಟಕ್ಕೆ ಬೇಕಾದರೂ ಈ ಪ್ರೀತಿ ಇಬ್ಬರನ್ನೂ ಕೂಡ ಒಯ್ಯುವ ಶಕ್ತಿ ಹೊಂದಿದೆ. ಅದರಲ್ಲೂ ತಂದೆ ಹಾಗೂ ಮಗಳ ನಡುವಿನ ವಿವರಿಸಲಾಗದ ಸ್ನೇಹ, ಪ್ರೀತಿ, ಮಮತೆಯುಕ್ತ ಸಂಬಂಧ ಹಲವು ಮನೆಗಳಲ್ಲಿ ಕಾಣಬಹುದು. ಮಗಳನ್ನು ತನ್ನ ತಾಯಿಯ, ಸೋದರಿಯ ರೂಪದಲ್ಲಿ ಕಾಣುತ್ತಾ ಅವಳ ರಕ್ಷಣೆಯ ಜವಾಬ್ದಾರಿಯನ್ನು ಚಾಚೂ ತಪ್ಪದೆಯೇ ನಿಭಾಯಿಸುವ ತಂದೆ ಒಂದು ಕಡೆ. ಮತ್ತೊಂದು ಕಡೆ ತಂದೆಯನ್ನು ತನ್ನ ಜೀವನದ ಮೊಟ್ಟ ಮೊದಲ ಹೀರೋ ಆಗಿ, ಕೆಲವೊಮ್ಮೆ ದೊಡ್ಡ ಮಗುವಿನಂತೆ ನೋಡಿಕೊಳ್ಳುವ ಮಗಳು ಇರುತ್ತಾಳೆ.

ಇಂಥ ಭಾಷಾತೀತ, ಅಪೇಕ್ಷೆರಹಿತವಾದ ನಿಷ್ಕಲ್ಮಶ ಪ್ರೀತಿಯ ಸಂಬಂಧವನ್ನು ತೋರ್ಪಡಿಸುವ ಫೋಟೊವೊಂದು ಟ್ವಿಟರ್‌ನಲ್ಲಿ ವೈರಲ್‌ ಆಗಿದೆ.
ಪುಟ್ಟ ಮಗಳಿಗೆ ಮಿದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ತಲೆಯ ಮುಂಭಾಗದ ಕೂದಲು ಬೋಳಿಸಲಾಗಿದೆ. ಆ ಭಾಗದಲ್ಲಿ ಶಸ್ತ್ರಚಿಕಿತ್ಸೆಯ ಹೊಲಿಗೆಗಳು ಕಾಣಿಸುತ್ತವೆ. ಆಕೆಯು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಅಥವಾ ಆಸ್ಪತ್ರೆಗೆ ಬರುವವರು ಆಕೆಯನ್ನು ಕಂಡು ವಿಚಿತ್ರವಾಗಿ ನೋಡುವುದನ್ನು ಕಂಡ ತಂದೆಯು ಮಗಳಿಗಾಗಿ ಒಂದು ಆಲೋಚನೆಯನ್ನು ಮಾಡಿ, ತಮ್ಮ ಮೇಲೆಯೇ ಪ್ರಯೋಗ ಮಾಡಿದ್ದಾರೆ.

BIG NEWS: ರಾಜಧಾನಿ ಬೆಂಗಳೂರಿನಲ್ಲಿಯೂ ಆರಂಭವಾಯ್ತು ನಕಲಿ ತುಪ್ಪದ ಹಾವಳಿ; KMF ಅಧಿಕಾರಿಗಳಿಂದ ದಾಳಿ

ತಮ್ಮ ತಲೆಯ ಮುಂಭಾಗವನ್ನು ಕೂಡ ಬೋಳಿಸಿಕೊಂಡಿದ್ದಾರೆ. ಆ ಭಾಗದಲ್ಲಿ ಮಗಳಿಗೆ ಇರುವಂತೆಯೇ ಹೊಲಿಗೆಯ ಗುರುತುಗಳನ್ನು ಕಪ್ಪು ಬಣ್ಣದಿಂದ ಬಳಿದುಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಸಾಗುತ್ತಿದ್ದರೆ, ಇಬ್ಬರಿಗೂ ಹೊಲಿಗೆ ಹಾಕಲಾಗಿದೆ ಎನ್ನಿಸಬೇಕು. ಆ ರೀತಿ ಕಾಣುವಂತೆ ತಂದೆ ಮಾಡಿಕೊಂಡಿದ್ದಾರೆ. ಮಗಳು ಕೂಡ ತನಗಾಗಿರುವ ಹೊಸ ರೂಪದಿಂದ ಅಸಹ್ಯ ಪಡಬಾರದು ಎನ್ನುವುದು ತಂದೆಯ ಪ್ರಯೋಗಕ್ಕೆ ಮೂಲವಾಗಿದೆ.

ತಂದೆ-ಮಗಳ ಈ ಫೋಟೊ ವೈರಲ್‌ ಅಗಿದ್ದು, ಟ್ವೀಟಿಗರು ಭಾವುಕರಾಗಿ ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡಿರುವುದನ್ನು ಅಕ್ಷ ರಗಳಲ್ಲೇ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...