ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಮಗಳ ವಿರುದ್ಧ ತಂದೆ ಕೆಂಡಾಮಂಡಲವಾದ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಮಗಳ ಜುಟ್ಟು ಹಿಡಿದು ತಂದೆ ಎಳೆದುಕೊಂಡು ಹೋಗಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಘಟನೆ ನಡೆದಿದೆ. ಪೋಷಕರ ವಿರೋಧದ ನಡುವೆಯೂ ಮಹೇಂದ್ರ ಮತ್ತು ಚೈತ್ರಾ ಮದುವೆಯಾಗಿದ್ದರು. ಮದುವೆಯಾದ ನಂತರ ನೋಂದಣಿ ಮಾಡಿಸಲು ನೋಂದಣಾಧಿಕಾರಿ ಕಚೇರಿಗೆ ಹೋಗಿದ್ದರು.
ಮದುವೆ ನೋಂದಣಿ ಮಾಡಿಸಿಕೊಂಡು ಹೊರಗೆ ಬರುತ್ತಿದ್ದಾಗ ಗಲಾಟೆಯಾಗಿದ್ದು, ಚೈತ್ರಾ ಜುಟ್ಟು ಹಿಡಿದು ತಂದೆ ಬಸವರಾಜನಾಯ್ಕ ಎಳೆದುಕೊಂಡು ಹೋಗಿದ್ದಾರೆ. ಗಲಾಟೆಯ ಬಳಿಕ ರಕ್ಷಣೆ ಕೋರಿ ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎನ್ನಲಾಗಿದೆ.