alex Certify ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿ; ಕಂಗಾಲಾದ ಪತ್ನಿಯಿಂದ ಗಂಡನ ಮನೆಯವರ ವಿರುದ್ಧ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿ; ಕಂಗಾಲಾದ ಪತ್ನಿಯಿಂದ ಗಂಡನ ಮನೆಯವರ ವಿರುದ್ಧ ದೂರು

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಸಿ ಮದುವೆಯಾದ ಒಂದು ವರ್ಷಕ್ಕೆ ಯುವಕ ಪತ್ನಿಗೆ ಕೈಕೊಟ್ಟಿದ್ದಾನೆ.

ನೊಂದ ಪತ್ನಿ ಗಂಡ ಸೇರಿದಂತೆ ಆತನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪತಿ ಸೇರಿ 16 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿತ್ರದುರ್ಗದ 24 ವರ್ಷದ ಅಶ್ವಿನಿ, ಹುಣಸೂರಿನ ಮರೂರು ಗ್ರಾಮದ ಅಭಿಷೇಕ್ ಪ್ರೀತಿಸಿ ಕಳೆದ ವರ್ಷ ಮದುವೆಯಾಗಿ ಜೀವನ ಸಾಗಿಸುತ್ತಿದ್ದರು.

ಇತ್ತೀಚೆಗೆ ಅಶ್ವಿನಿಗೆ ಅಭಿಷೇಕ್ ಕೈ ಕೊಟ್ಟಿದ್ದು, ಅತಂತ್ರಳಾದ ಅಶ್ವಿನಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಭಿಷೇಕ್ ಮನೆಯವರಿಂದಲೇ ಸಮಸ್ಯೆ ಎದುರಾಗಿದೆ ಎಂದು ಅಶ್ವಿನಿ ಆರೋಪಿಸಿದ್ದು, ಅಭಿಷೇಕ್ ಹಾಗೂ ಆತನ ಕುಟುಂಬದ 16 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...