alex Certify ಮದುವೆ ಹಿಂದಿತ್ತು ಲವ್ ಜಿಹಾದ್ ಉದ್ದೇಶ: ಅತ್ಯಾಚಾರ ವಿಡಿಯೋ ಮಾಡಿ ಬ್ಲಾಕ್ಮೇಲ್; ಅಪೂರ್ವ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹಿಂದಿತ್ತು ಲವ್ ಜಿಹಾದ್ ಉದ್ದೇಶ: ಅತ್ಯಾಚಾರ ವಿಡಿಯೋ ಮಾಡಿ ಬ್ಲಾಕ್ಮೇಲ್; ಅಪೂರ್ವ ಆರೋಪ

ಹುಬ್ಬಳ್ಳಿ: ನನ್ನ ಮದುವೆಯ ಹಿಂದೆ ಲವ್ ಜಿಹಾದ್ ಉದ್ದೇಶವಿದೆ ಎಂದು ಗಂಡ ಇಜಾಜ್ ನಿಂದ 23 ಬಾರಿ ಮಚ್ಚಿನೇಟಿಗೆ ಒಳಗಾದ ಅಪೂರ್ವ ಪುರಾಣಿಕ್ ಅಲಿಯಾಸ್ ಆರ್ಪಾ ಭಾನು ಹೇಳಿದ್ದಾರೆ.

ಅತ್ಯಾಚಾರದ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿ ಮದುವೆಯಾಗಿದ್ದ ಇಜಾಜ್, ನನಗೆ ಬುರ್ಖಾ, ಹಿಜಾಬ್ ಧರಿಸಬೇಕು. ಮಾಂಸಾಹಾರ ಸೇವಿಸಬೇಕು, ನಮಾಜ್ ಮಾಡಬೇಕೆಂದು ಒತ್ತಾಯಿಸಿದ್ದ ಎಂದು 23 ಬಾರಿ ಮಚ್ಚಿನೇಟಿಗೆ ಒಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವ ಪುರಾಣಿಕ್ ಗಂಭೀರ ಆರೋಪ ಮಾಡಿದ್ದಾರೆ.

ಇಜಾಜ್ ಆಟೋದಲ್ಲಿ ಆಗಾಗ ಕಾಲೇಜಿಗೆ ಹೋಗುತ್ತಿದ್ದೆ. ಒಂದು ದಿನ ಅತ್ಯಾಚಾರ ಎಸಗಿದ್ದು, ಅದನ್ನು ವಿಡಿಯೋ ಮಾಡಿ ಪೋಷಕರಿಗೆ ತೋರಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಅನಿವಾರ್ಯವಾಗಿ ಆತನನ್ನು ಮದುವೆಯಾದ ನಂತರ ಮಾಂಸಹಾರ ಸೇವಿಸುವಂತೆ, ಅವರ ಸಂಸ್ಕೃತಿ ಪಾಲಿಸುವಂತೆ ಒತ್ತಡ ಹಾಕುತ್ತಿದ್ದ. ಆತನಿಗೆ ಇನ್ನೊಂದು ಮದುವೆಯಾಗಿ ಮೂವರು ಮಕ್ಕಳಿರುವುದು ಗೊತ್ತಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೆ ಇಂದು ತಿಳಿಸಿದ್ದಾರೆ. ಇತ್ತೀಚೆಗೆ ಗದಗದಲ್ಲಿ ಅಪೂರ್ವ ಮೇಲೆ ಇಜಾಜ್ ಮಚ್ಚಿನಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...