alex Certify ಮರಿಗಳ ರಕ್ಷಣೆಗಾಗಿ ನಾಗರಹಾವನ್ನೇ ಬಗ್ಗು ಬಡಿದ ಕೋಳಿ..! ತಾಯಿ ಪ್ರೀತಿ ಕಂಡು ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಗಳ ರಕ್ಷಣೆಗಾಗಿ ನಾಗರಹಾವನ್ನೇ ಬಗ್ಗು ಬಡಿದ ಕೋಳಿ..! ತಾಯಿ ಪ್ರೀತಿ ಕಂಡು ನೆಟ್ಟಿಗರು ಫಿದಾ

ತಾಯಿಯ ಮಮತೆ ಹಾಗೂ ವಾತ್ಸಲ್ಯದ ಎದುರು ಜಗತ್ತಿನ ಯಾವ ಶಕ್ತಿಯೂ ನಿಲ್ಲಲಾರದು. ತಮ್ಮ ಮಕ್ಕಳ ರಕ್ಷಣೆ ಮಾಡಲಿಕ್ಕೋಸ್ಕರ ತಾಯಿ ಎಂತಹ ಸಾಹಸವನ್ನೂ ಮಾಡಬಲ್ಲಳು.

ತಾಯಿ ವಾತ್ಸಲ್ಯ ಅನ್ನೋದು ಮನುಷ್ಯರಲ್ಲಿ ಮಾತ್ರವಲ್ಲದೇ ಮೂಕ ಪ್ರಾಣಿ ಪಕ್ಷಿಗಳಲ್ಲೂ ಇರುತ್ತವೆ ಅನ್ನೋದನ್ನ ತೋರಿಸುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಹೆಣ್ಣು ಕೋಳಿಯೊಂದು ತನ್ನ ಮರಿಗಳನ್ನ ಕಾಪಾಡಲಿಕ್ಕೋಸ್ಕರ ನಾಗರಹಾವಿನೊಂದಿಗೆ ಸೆಣಸಾಡಿದೆ.

ನಾಗರಹಾವನ್ನ ಹೆದರಿಸಿ ಓಡಿಸಿದ ಬಳಿಕ ಮರಿಗಳ ಬಳಿ ಓಡಿ ಬಂದ ಕೋಳಿ ಅವುಗಳು ಹೇಗಿದ್ದಾವೆ ಎಂದು ಪರೀಕ್ಷೆ ಮಾಡಿದೆ.

ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಕೋಸ್ಕಲ್​ ಅಕಿನ್​ ಎಂಬವರು ಶೇರ್​ ಮಾಡಿದ್ದು, ತಾಯಿಯ ಪ್ರೀತಿ. ಭಯಕ್ಕಿಂತಲೂ ಪ್ರೀತಿ ಹೆಚ್ಚು ಶಕ್ತಿಶಾಲಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ 24300 ವೀವ್ಸ್​ ಹಾಗೂ 2413 ಲೈಕ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

— Köksal Akın (@newworlddd555) June 16, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...