alex Certify ಕುಡಿದ ಅಮಲಿನಲ್ಲಿ ಮಾಜಿ ಪ್ರಿಯಕರನ ಮನೆಗೆ ನುಗ್ಗಿ ಧ್ವಂಸ ಮಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಮಾಜಿ ಪ್ರಿಯಕರನ ಮನೆಗೆ ನುಗ್ಗಿ ಧ್ವಂಸ ಮಾಡಿದ ಮಹಿಳೆ

ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಮನೆಗೆ ದಾಳಿ ಮಾಡಿದ್ದಾಳೆ. ಸುಮಾರು 2,000 ಪೌಂಡ್ ( 2.19 ಲಕ್ಷ ರೂ.) ಕ್ಕಿಂತ ಹೆಚ್ಚು ಮೌಲ್ಯದ ಹಾನಿ ಎಸಗಿದ್ದಾಳೆ.

ಲಾರೆನ್ ಬ್ಲೇನಿ ಎಂದು ಗುರುತಿಸಲ್ಪಟ್ಟ ಮಹಿಳೆ ಮಾರ್ಚ್ 21 ರಂದು ತನ್ನ ಮಾಜಿ ಪ್ರಿಯಕರ ಜೇಮ್ಸ್ ಕ್ಯಾಂಪ್‌ಬೆಲ್‌ಗೆ ಸೇರಿದ ಮನೆಯ ಕಿಟಕಿಯನ್ನು ಮುರಿದು ಹಾಕಿದ್ದಾಳೆ. ಕಿಟಕಿಯ ಮುಖಾಂತರ ಈತನ ಮನೆಗೆ ನುಗ್ಗಿ ಧ್ವಂಸಗೊಳಿಸಿದ್ದಾಳೆ. ಈಕೆಗೆ ಮತ್ತೊಬ್ಬ ಪುರುಷ ವ್ಯಕ್ತಿಯೂ ಸಹಾಯ ಮಾಡಿದ್ದಾಗಿ ದಾರಿಹೋಕರು ತಿಳಿಸಿದ್ದಾರೆ.

ಪೊಲೀಸರ ಭರ್ಜರಿ ಬೇಟೆ: IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ, ಬರೋಬ್ಬರಿ 23 ಬುಕ್ಕಿಗಳು ಅರೆಸ್ಟ್

ಬ್ಲೇನಿ ದಾಳಿಯಿಂದ ಕ್ಯಾಂಪ್‌ಬೆಲ್ ಮನೆಯಲ್ಲಿ 2,000 ಪೌಂಡ್ ಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಗೆ ಹಾನಿಯಾಗಿದೆ. ಇದರಲ್ಲಿ ಅವರ 900 ಪೌಂಡ್ ನ ಗಿಟಾರ್, ಎರಡು ಟಿವಿ ಸೆಟ್ ಗಳು ಹಾಗೂ 500 ಪೌಂಡ್ ಮೌಲ್ಯದ ಇನ್ನೊಂದು ಗಿಟಾರ್ ನಾಪತ್ತೆಯಾಗಿದೆ.

ಇನ್ನು ಮಹಿಳೆ ಮನೆಗೆ ಹಾನಿ ಮಾಡಿರುವ ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದಾಗ, ಆ ವೇಳೆಗಾಗಲೇ ಆಕೆ ಅಲ್ಲಿಂದ ಎಸ್ಕೇಪ್ ಆಗಿದ್ದಳು. ಅಂತಿಮವಾಗಿ ಬ್ಲೇನಿ ಕುಡಿದ ಅಮಲಿನಲ್ಲಿ ಈ ರೀತಿ ಮಾಡಿರುವುದಾಗಿ ತನ್ನ ತಪ್ಪೊಪ್ಪಿಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...