alex Certify ಶಾಲೆಯನ್ನೇ ಬಾರ್ ಮಾಡಿಕೊಂಡಿದ್ದ ಶಿಕ್ಷಕ ಸಸ್ಪೆಂಡ್, ಕುಡಿದು ಮಲಗಿದ್ದ ಶಿಕ್ಷಕನಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯನ್ನೇ ಬಾರ್ ಮಾಡಿಕೊಂಡಿದ್ದ ಶಿಕ್ಷಕ ಸಸ್ಪೆಂಡ್, ಕುಡಿದು ಮಲಗಿದ್ದ ಶಿಕ್ಷಕನಿಗೆ ಬಿಗ್ ಶಾಕ್

ಛತ್ತೀಸ್ ಗಢದ ಜಸ್ಪುರದ ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದು ಆತನ್ನು ಅಮಾನತುಗೊಳಿಸಲಾಗಿದೆ.

ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರ್ಕಾರಿ ಪೂರ್ವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ದಿನೇಶ್ ಕುಮಾರ್ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ. ಅಲ್ಲದೆ, ಶಾಲೆಯಲ್ಲಿ ಮದ್ಯ ಸೇವಿಸಿ ಬಾಲಕಿಯರು, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ. ಈ ಶಿಕ್ಷಕನ ದುರ್ನಡತೆಯ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಕ ಮದ್ಯಪಾನ ಮಾಡಿ ವಿದ್ಯಾರ್ಥಿಗಳನ್ನು ಥಳಿಸಿದ್ದಲ್ಲದೆ, ದುರ್ನಡತೆ ತೋರಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಜಿಲ್ಲಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...