alex Certify ಇಲ್ಲಿ ಟ್ರಕ್ ಚಾಲಕರಿಗೆ ಸಿಗ್ತಿದೆ 72 ಲಕ್ಷ ರೂ.ವಾರ್ಷಿಕ ಸಂಬಳ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಟ್ರಕ್ ಚಾಲಕರಿಗೆ ಸಿಗ್ತಿದೆ 72 ಲಕ್ಷ ರೂ.ವಾರ್ಷಿಕ ಸಂಬಳ…..!

ಬ್ರಿಟನ್ ನ ಸೂಪರ್ ಮಾರ್ಕೆಟ್ ಟ್ರಕ್ ಚಾಲಕರಿಗೆ ಬೇಡಿಕೆ ಹೆಚ್ಚಾಗಿದೆ. ಅವರಿಗೆ ಸಿಗ್ತಿರುವ ಸಂಬಳ, ನಮ್ಮ ದೇಶದಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಮುಖ್ಯಸ್ಥರಿಗೂ ಸಿಗ್ತಿಲ್ಲ.

ಯಸ್, ಅಲ್ಲಿನ ಸೂಪರ್ ಮಾರ್ಕೆಟ್ ಒಂದು, ವಸ್ತುಗಳನ್ನು ಡಿಲೆವರಿ ಮಾಡುವ ಟ್ರಕ್ ಚಾಲಕರಿಗೆ 70,000 ಪೌಂಡ್ ಅಂದ್ರೆ ಸುಮಾರು 70,88,515 ರೂಪಾಯಿಯನ್ನು ವಾರ್ಷಿಕ ಸಂಬಳ ರೂಪದಲ್ಲಿ ನೀಡಲಿದೆ. ಇದಲ್ಲದೆ 2000 ಪೌಂಡ್ ಅಂದ್ರೆ ಸುಮಾರು 2,02,612 ರೂಪಾಯಿ ಬೋನಸ್ ಕೂಡ ನೀಡಲಿದೆ.

ಟೆಸ್ಕೊ ಮತ್ತು ಸೇನ್ಸ್ ಬರಿಯಂತಹ ಸೂಪರ್ ಮಾರ್ಕೆಟ್ ಗಳು, ಟ್ರಕ್ ಚಾಲಕರಿಗೆ ಒಳ್ಳೆಯ ಸಂಬಳ ಆಫರ್ ಮಾಡ್ತಿವೆ. ಬ್ರಿಟನ್ ನಲ್ಲಿ 100,000 ಚಾಲಕರ ಕೊರತೆಯಿದೆ. ಇದೇ ಕಾರಣಕ್ಕೆ ಟ್ರಕ್ ಚಾಲಕರಿಗೆ ಹೆಚ್ಚಿನ ಸಂಬಳ ಆಫರ್ ಮಾಡಲಾಗ್ತಿದೆ.

17 ವರ್ಷದ ಅನುಭವ ಹೊಂದಿರುವ ಟ್ರಕ್ ಚಾಲಕನೊಬ್ಬ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಅನುಭವದ ಆಧಾರದ ಮೇಲೆ ಆತನಿಗೆ 2000 ಪೌಂಡ್, ಬೋನಸ್ ನೀಡುವ ಆಫರ್ ನೀಡಲಾಗಿದೆಯಂತೆ. ವಾರದಲ್ಲಿ ಐದು ರಾತ್ರಿ ಆತ ಕೆಲಸ ಮಾಡಬೇಕೆಂದು ಕಂಪನಿ ಹೇಳಿದೆಯಂತೆ. ಶನಿವಾರ ಹಾಗೂ ಭಾನುವಾರ ಕೆಲಸ ಮಾಡುವ ಚಾಲಕರ ಸಂಬಳ ಹೆಚ್ಚಿರುತ್ತದೆ. ನನ್ನ ಬಾಸ್ ಕೂಡ ಇಷ್ಟು ಸಂಬಳ ಪಡೆಯುವುದಿಲ್ಲವೆಂದು ಆತ ಹೇಳಿದ್ದಾನೆ. ಸೂಪರ್ ಮಾರ್ಕೆಟ್ ಕಂಪನಿಗಳು, ವಾರಾಂತ್ಯದಲ್ಲಿ ಕೆಲಸ ಮಾಡುವ ಚಾಲಕರನ್ನು ಹುಡುಕುತ್ತಿದೆ. ಅದಕ್ಕೆ ಸಂಬಳದ ಚಿಂತೆಯಿಲ್ಲವೆಂದು ಆತ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...