ನೀವು ಬೇಡರ ಕಣ್ಣಪ್ಪ ಸಿನಿಮಾ ನೋಡಿದ್ದರೆ, ಅದರಲ್ಲಿ ಬೇಡ ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸಿರುವ ಮನೋಜ್ಞ ಕತೆಯಿದೆ. ಹಾಗೆಯೇ ಇತಿಹಾಸದಲ್ಲಿ, ಪುರಾಣಗಳಲ್ಲಿ ಶಿವಭಕ್ತರು ಈಶ್ವರನಿಗೆ ಪ್ರಸಾದವನ್ನಾಗಿ ಮಾಂಸವನ್ನು ಇಡುತ್ತಿದ್ದ ಬಗ್ಗೆ ನೀವು ಕೇಳಿರಬಹುದು.
ಹೌದು, ಆಂಧ್ರಪ್ರದೇಶದ ಪಾಲಕೋಲ್‌ನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರೊಬ್ಬರು ಈ ವಿಶೇಷ ಪ್ರಸಾದವನ್ನು ಅರ್ಪಿಸಿದ್ದಾರೆ. ಇದರಿಂದ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಎಂದಿಗಿಂತ ತುಸು ಹೆಚ್ಚೇ ಇದೆ.
ಭಕ್ತರು ನೈವೇದ್ಯವನ್ನು ಭಗವಂತನಿಗೆ ಅಭಿಷೇಕವಾಗಿ ಹಾಲು ಅಥವಾ ಮೊಸರನ್ನು ಅರ್ಪಿಸುತ್ತಾರೆ. ಇವುಗಳಲ್ಲದೆ, ಕೆಲವರು ಜೇನುತುಪ್ಪ, ಸಕ್ಕರೆ ಮತ್ತು ವಿವಿಧ ಹಣ್ಣಿನ ರಸವನ್ನು ದೇವರಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕೆಲವರು ಎಳನೀರನ್ನು ಅಭಿಷೇಕವಾಗಿ ಅರ್ಪಿಸುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮೂಲಕ ಭಗವಂತ ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ.
ಬಾಡಿಲೋಷನ್ ಅನ್ನು ಈ ಸಮಯದಲ್ಲಿ ಹಚ್ಚಿದರೆ ಚರ್ಮದ ಸಮಸ್ಯೆ ಕಾಡಲ್ಲ
ಆದರೆ, ಪಾಲಕೋಲ್‌ನ ದೇವೆಲ್ಲಾ ನರಸಿಂಹ ಮೂರ್ತಿ ಅವರು ಶಿವನಿಗೆ ನೈವೇದ್ಯವಾಗಿ 10 ಕಿಲೋ ಐಸ್‌ಕ್ರೀಂ ಅರ್ಪಿಸಿದ್ದಾರೆ. ಇದರಿಂದ ಒಮ್ಮಿಂದೊಮ್ಮೆಲೆ ಅವರು ಪ್ರಸಿದ್ಧಿ ಪಡೆದಿದ್ದಾರೆ. ನೈವೇದ್ಯವಾಗಿ ಐಸ್ ಕ್ರೀಮ್ ನೀಡಿದಾಗ ಅದನ್ನು ಶಿವಲಿಂಗದ ಮೇಲೆ ಸುರಿಯಲಾಗಿದೆ. ಅದು ದೇವರ ಸುತ್ತಲೂ ನೆಲೆಸಿದ ಅದ್ಭುತ ದೃಶ್ಯವನ್ನು ವೀಕ್ಷಿಸಲು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಜೊತೆಗೆ ಐಸ್ ಕ್ರೀಂ ಅನ್ನು ಪ್ರಸಾದವನ್ನಾಗಿ ಸ್ವೀಕರಿಸಿದ್ದಾರೆ.