ದೇಶಾದ್ಯಂತ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅಣ್ಣಂದಿರ ಜೇಬಿಗೆ ಕತ್ತರಿ ಹಾಕಲು ತಂಗಿಯರಿಗೆ ಇದು ವಿಶೇಷ ದಿನ ಎಂದು ಬಹಳ ಕಡೆ ತಮಾಷೆಯಿಂದ ಹೇಳಲಾಗುತ್ತದೆ.
ಸರ್ವವೂ ಡಿಜಿಟಲ್‌ಮಯವಾಗುತ್ತಿರುವ ಇಂದಿನ ದಿನದಲ್ಲಿ ರಾಖಿ ಕಟ್ಟಿ ಕಲೆಕ್ಷನ್ ಮಾಡಲು ಸಹೋದರಿಯರೂ ಸಹ ಕ್ಯೂಆರ್ ಕೋಡ್ ಇರುವ ಪಾವತಿ ಆಯ್ಕೆ ಸಿಕ್ಕಿದೆ.
ಪರ್ಫೆಕ್ಟ್ ʼಬೇಕರ್ʼ ನೀವಾಗಬೇಕಾ…? ಹಾಗಿದ್ದರೆ ಈ ಟ್ರಿಕ್ಸ್ ಬಳಸಿ
ಈ ಬಗ್ಗೆ ಟ್ವಿಟರ್‌ನಲ್ಲಿ ಶೇರ್ ಮಾಡಲಾದ ಫನ್ನಿ ಫೋಟೋವೊಂದರಲ್ಲಿ, ಆರತಿ ತಟ್ಟೆಯೊಂದರ ಮೇಲೆ ರಾಖಿ ಹಾಗೂ ಅದನ್ನು ಕಟ್ಟಿದಾಗ ಕಲೆಕ್ಷನ್ ಮಾಡಲೆಂದು ಕ್ಯೂಆರ್ ಕೋಡ್ ಸಹ ಇರುವ ಚಿತ್ರವೊಂದು ವೈರಲ್ ಆಗಿದೆ.
ಈ ಅಪ್ಡೇಟೆಡ್ ರಕ್ಷಾ ಬಂಧನದ ಝಲಕ್ ನೆಟ್ಟಿಗರಲ್ಲಿ ಭಾರೀ ಫನ್ನಿ ಪ್ರತಿಕ್ರಿಯೆಗಳನ್ನು ಮೂಡಿಸಿದೆ.