ವಿನೂತನ ರೀತಿಯ ಕೇಶ ವಿನ್ಯಾಸದ ಪ್ರಯೋಗ ಮಾಡಲು ಕೈ ಹಾಕಿದಾಗ ತೀರಾ ಎಡವಟ್ಟಿನ ಫಲಿತಾಂಶ ಸಿಕ್ಕು ಭಾರೀ ಮುಜುಗರಕ್ಕೊಳಗಾಗುವ ಸಾಧ್ಯತೆಗಳು ಬಹಳ ಇರುತ್ತವೆ. ಇದರಿಂದ ನಮ್ಮನ್ನು ನೋಡಿದ ಮಂದಿಗೆ ನಗು ತಡೆಯಲಾಗದಷ್ಟು ಕೆಟ್ಟದಾಗಿ ಕಾಣುವ ಸಾಧ್ಯತೆಯೂ ಇದೆ.
ಇಂಥದ್ದೇ ನಿದರ್ಶನವೊಂದರಲ್ಲಿ, ತನ್ನಿಚ್ಛೆಯ ಹೇರ್ ಕಟ್ ಪಡೆಯಲು ತಲೆಯ ಮೇಲೊಂದು ಬಟ್ಟಲು ಇಟ್ಟುಕೊಂಡಿರುವ ಬಾಲಕನೊಬ್ಬನ ವಿಡಿಯೋವೊಂದು ವೈರಲ್ ಆಗಿದೆ.
ಅಂತಿಮ ಫಲಿತಾಂಶ ನೋಡಲು ಕಾತರದಿಂದ ಕಾಯುತ್ತಿರುವ ಬಾಲಕನ ಕುಟುಂಬಸ್ಥರಿಗೆ ಆತನ ತಲೆ ಮೇಲಿಂದ ಬಟ್ಟಲನ್ನು ತೆಗೆಯುತ್ತಲೇ ಈ ಐಡಿಯಾ ದೊಡ್ಡ ಎಡವಟ್ಟಾಗಿರುವುದು ಕಂಡುಬಂದಿದೆ.
ಇಂದು ಮಹೇಶ್ ಬಾಬು ನಟನೆಯ ‘ರಾಜಕುಮಾರುಡು’ ಸಿನಿಮಾ ಬಿಡುಗಡೆಯಾದ ದಿನ
ಈ ವಿನೋದಮಯ ವಿಡಿಯೋ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ 3000ಕ್ಕೂ ಹೆಚ್ಚಿನ ಲೈಕ್ಸ್ ಗಿಟ್ಟಿಸಿದೆ. ’ಶ್ರೆಕ್’ ಚಿತ್ರದ ಲಾರ್ಡ್ ಫರ್ಕಾದ್ ಪಾತ್ರಧಾರಿಯ ಕೇಶವಿನ್ಯಾಸಕ್ಕೆ ಈತನ ಹೇರ್‌ಸ್ಟೈಲ್‌ಅನ್ನು ಹೋಲಿಕೆ ಮಾಡಲಾಗಿದೆ.
https://www.instagram.com/p/CT-j9-ZlmTM/?utm_source=ig_embed&utm_campaign=embed_video_watch_again